ಪ್ರಮುಖ ಸುದ್ದಿ

ತೊಗರಿ ಖರೀದಿಗೆ ರೈತರ ನೋಂದಣಿ ಅವಧಿ ವಿಸ್ತರಣೆ

ಜಿಲ್ಲೆಯಲ್ಲಿ 35 ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ

ಯಾದಗಿರಿ– 2019-20ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳನ್ನು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 35 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ನೋಂದಣಿ ಅವಧಿಯನ್ನು ಫೆಬ್ರುವರಿ 8ರ ವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಣಿ ಮಾಡಿದ ರೈತರ ತೊಗರಿಯನ್ನು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್.ಪಿ.ಓ.ಗಳ ಮುಖಾಂತರ ತೊಗರಿ ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರದ ಬೆಂಬಲ ಬೆಲೆ 6,100 ರೂ. ಇದ್ದು, ಪ್ರತಿಯೊಬ್ಬ ರೈತರಿಂದ ಎಕೆರೆಗೆ 5 ಕ್ವಿಂಟಲ್‍ನಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುವುದು.

ಜಿಲ್ಲೆಯಲ್ಲಿ ಯಾದಗಿರಿ, ರಾಮಸಮುದ್ರ, ಸೈದಾಪೂರ, ಗುರುಮಠಕಲ್, ಕೊಂಕಲ್, ಚಪೇಟ್ಲಾ, ಗಣಪೂರ, ಹತ್ತಿಕುಣಿ, ಅಲ್ಲಿಪುರ, ಯಲ್ಹೇರಿ, ಅನಪೂರ, ಯರಗೋಳ, ಪುಟಪಾಕ್, ಶಹಾಪೂರ, ರಸ್ತಾಪುರ, ಬೆಂಡೆಬೆಂಬಳಿ, ಗಂಗನಾಳ, ಚಾಮನಾಳ, ಹೈಯಾಳ್, ದೋರನಹಳ್ಳಿ, ಶಿರವಾಳ, ಟೊಕಾಪೂರ, ಹೊಸಕೇರಾ, ಮದ್ರಿಕಿ, ಸುರಪುರ, ಏವೂರು, ಯಾಳಗಿ, ಕಕ್ಕೇರಾ, ಕೊಡೇಕಲ್, ನಗನೂರು, ಮಾಲಗತ್ತಿ, ರಾಜನಕೋಳೂರು, ಹುಣಸಗಿ, ಕೆಂಭಾವಿ-1 ಮತ್ತು ಕೆಂಭಾವಿ-2ರಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ರೈತ ಬಾಂಧವರು ಕೊನೆಯ ದಿನಾಂಕದವರೆಗೆ ಕಾಯದೆ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಒಬ್ಬ ರೈತ ಒಂದೇ ಅರ್ಜಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಮತ್ತು ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button