ಸಗರನಾಡಿನ ಸುಪುತ್ರ ಡಾ.ರಂಗರಾಜ ವನದುರ್ಗ ಬಗ್ಗೆ ನಿಮಗೆಷ್ಟು ಗೊತ್ತು.?
ಡಾ.ರಂಗರಾಜ ವನದುರ್ಗ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ
ನಮ್ಮ ಶ್ರೇಣಿಕರಣ ವವ್ಯಸ್ಥೆಯ ತಳ ಸಮಾಜದಲ್ಲಿ ಜನಿಸಿ ಅಲ್ಲಿನ ನೋವುಗಳನ್ನು ಅನುಭವಸಿ ತಮ್ಮ ಪ್ರತಿಭೆ, ಗಂಭೀರವಾದ ಶಿಸ್ತುಬದ್ದ ಅಧ್ಯಯನ ಮತ್ತು ಸಾಧನೆಯ ಛಲದಿಂದ ಪ್ರಾಮಾಣಿಕತೆಯಿಂದ ಅತಂತ್ಯ ಎತ್ತರಕ್ಕೆ ಏರಿದ ಮುಕ್ತ ಸ್ಪಂದನಾ ಜೀವಿ, ಪ್ರಜ್ಞಾವಂತ ಪ್ರಗತಿಪರ, ಸಾಮಾಜಿಕ, ಸಾಂಸ್ಕೃತಿಕ ಚಿಂತಕ, ದಲಿತ ಸಂವೇದನಾಶೀಲ ಲೇಖಕ, ಸಾಹಿತಿ ಡಾ. ರಂಗರಾಜ ವನದುರ್ಗ ಅವರು ಕಲ್ಯಾಣ ಕರ್ನಾಟಕ ಹಾಗೂ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಹೇಳಿದರೆ ಅತೀಶಯೋಕ್ತಿಯಾಗದು.
ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಪ್ರಾಧ್ಯಾಪಕ ಹಾಗೂ ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿರುವ ಮತ್ತು ಶಹಾಪೂರ ತಾಲ್ಲೂಕಿನ ವನದುರ್ಗ ಗ್ರಾಮದವರಾದ ಡಾ. ರಂಗರಾಜ ವನದುರ್ಗರವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಬಡ ಕೃಷಿಕ ಕುಟುಂಬದ ದೇವಿಂದ್ರಪ್ಪ ದೊರಿ ಮತ್ತು ಸಿದ್ದಮ್ಮ ದಂಪತಿಗಳ ಉದರದಲ್ಲಿ 23/07/1966 ರಲ್ಲಿ ಜನಿಸಿದರು.
ಡಾ.ರಂಗರಾಜ ವನದುರ್ಗ ಅವರು, ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ವನದುರ್ಗ ಗ್ರಾಮದಲ್ಲಿ, ಪದವಿ ಶಿಕ್ಷಣ ಸಿಂದಗಿಯಲ್ಲಿ ಪೂರೈಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ತೃತೀಯ ರ್ಯಾಂಕನೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ನಂತರ ಇದೇ ವಿಶ್ವವಿದ್ಯಾಲಯದಿಂದ ಸುರಪುರ ಸಂಸ್ಥಾನ – ಒಂದು ಅಧ್ಯಯನ ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದರು. ಹಾಗೂ ಡಿ.ಬಿ.ಎಸ್, ಡಪ್.ಇನ್.ಎಪಿ. ಪದವಿ ಕೂಡ ಪಡೆದ್ದಿದಾರೆ.
ಶಹಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಡಾ.ರಂಗರಾಜ ವನದುರ್ಗ ಅವರು, ಹನುಮನಾಳ, ಕಲಬುರ್ಗಿಯಲ್ಲಿ ಸೇವೆ ಸಲ್ಲಿಸಿ ನಂತರ ಬೆಳಗಾವಿಯ ಸ್ನಾತಕೋತ್ತರ ಕೇಂದ್ರ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ ವೃತ್ತಿ ಬದ್ಧತೆಯಿಂದ, ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರಾಗಿ ನೇಮಕಗೊಂಡರು. ನಂತರ 2010 ರಿಂದ 2013 ರವರಿಗೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿ ಸೇವೆ ಸಲ್ಲಿಸಿ ಪ್ರಸ್ತುತವಾಗಿ ಬೆಳಗಾವಿಯ ರಾಣಿ ಚನ್ನಮ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ರಂಗರಾಜ ವನದುರ್ಗ ಅವರು ಶಹಾಪುರದಲ್ಲಿರುವಾಗ ಕರ್ನಾಟಕ ಕಲಾರಂಗ ಕಟ್ಟಿ ಸಾಂಸ್ಕೃತಿಕ ಮನಸ್ಸುಗಳನ್ನು ಸಂಘಟಿಸಿ ಉತ್ತಮವಾದ ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣವನ್ನು ನಿರ್ಮಸಲು ಶ್ರಮಸಿದರು. ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬಂಡಾಯ ಸಾಹಿತ್ಯ ಸಂಘಟನೆ ಮುಂತಾದ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನೇತಾರರಾಗಿ ರಚನಾತ್ಮಾಕ ಕಾರ್ಯಚಟುವಟಿಕೆಗಳಲ್ಲಿ ತೊಡಸಿಕೊಂಡದ್ದರು. ಶಿವಮೊಗದ ಕುವೆಂಪು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮಹತ್ತರವಾದ ಜವಾಬ್ದಾರಿಗಳನ್ನು ಹೊತ್ತುಕೊಂಡು ಆ ಸ್ಥಾನಗಳಿಗೆ ಮಹತ್ವವನ್ನು ತಂದುಕೊಟ್ಟಿದ್ದಾರೆ.
ಸಹ್ಯಾದ್ರಿ ಉತ್ಸವ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಿಂದುಳಿದ ವರ್ಗಗಳ ಘಟಕ, ಅಂಬೇಡ್ಕರ ಅಧ್ಯಯನ ಕೇಂದ್ರ, ಪಿ.ಯು.ಸಿ. ಪಠ್ಯಪುಸ್ತಕ ರಚನಾ ಮಂಡಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಶ್ವವಿದ್ಯಾಲಯದ ಮೌಲ್ಯಮಾಪನ ಹಾಗೂ ಆಡಳಿತ ವಿಭಾಗ ಮುಂತಾದವುಗಳಲ್ಲಿ ತುಂಬಾ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಿ ಅನುಕರಣೀಯರಾಗಿದ್ದಾರೆ. ಆ ವಿಭಾಗಗಳಲ್ಲಿ ಅವರ ಕಾರ್ಯಸಾಧನೆ ಶ್ಲಾಘನೀಯವಾದುದ್ದು. ವಿಶ್ವವಿದ್ಯಾಲಯದ ವಿವಿಧ ಜವಬ್ದಾರಿಗಳನ್ನು ಹೊತ್ತುಕೊಂಡು ಆ ಹುದ್ದೆಗಳಿಗೆ, ಸ್ಥಾನಗಳಿಗೆ ತಮ್ಮ ರಚನಾತ್ಮಕ ಕಾರ್ಯಗಳ ಮೂಲಕ ಅವುಗಳಿಗೆ ಮಹತ್ವವನ್ನು ತಂದುಕೊಟ್ಟರು ಡಾ.ರಂಗರಾಜ ವನದುರ್ಗ ಅವರ ಮಾರ್ಗದರ್ಶನದಲ್ಲಿ ಇದುವರೆಗೆ 13ಜನ ವಿದ್ಯಾರ್ಥಿಗಳು ಪಿ.ಎಚ್.ಡಿ. ಹಾಗೂ 8ಜನ ವಿದ್ಯಾರ್ಥಿಗಳಯ ಎಂ.ಫೀಲ್ ಪದವಿಯನ್ನು ಪಡೆದಿದದ್ದಾರೆ.
ನಾಡಿನ ಶ್ರೇಷ್ಠ ವಿದ್ವಾಂಸರಾಗಿರುವ ಡಾ.ರಂಗರಾಜ ವನದುರ್ಗರವರು ವಿಮರ್ಶೆ, ಸಂಶೋಧನೆ, ಸಂಪಾದನೆ, ನಾಟಕ, ಕಾವ್ಯ, ಕಾದಂಬರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿ 31ಕ್ಕೂ ಹೆಚ್ಚು ಕೃತಿಗಳನ್ನು ನಾಡಿನ ಸಾರಸತ್ವ ಲೋಕಕ್ಕೆ ಅರ್ಪಿಸಿದ್ದಾರೆ. ಡಾ.ರಂಗರಾಜ ವನದುರ್ಗ ಅವರ ಬಹುಮುಖ್ಯ ಕೃತಿಗಳು ಕನ್ನಡಿಗರ ಮನಗೆದ್ದಿವೆ. ಅವುಗಳಲ್ಲಿ ಹರಿಹರನ ಸಾಂಸ್ಕೃತಿಕ ಲೋಕ, ಶಹಾಪುರದ ಶಾಸನಗಳು, ಸುರಪುರ ಸಂಸ್ಥಾನ, ಕನಕದಾಸರ ವೈಚಾರಿಕತೆ, ಕಾಡೂರು ಸಾಂಸ್ಕೃತಿಕ ಮುಖಾಮುಖಿ, ಬಂಡಾಯ ಸಾಹಿತ್ಯ ಸಂವೇದನೆ, ಬಂಡೆದ್ದವರು, ದಲಿತ ಸಂವೇದನೆ ಮತ್ತು ಜನಪರ ಚಳವಳಿ, ಸಾಹಿತ್ಯ ಮತ್ತು ಸಮೂಹ ಮಾದ್ಯಮ, ಅಂಬೇಡ್ಕರರ ಚಿಂತನೆಗಳು ಮುಂತಾದ ಕೃತಿಗಳು ನಾಡಿಗೆ ನೀಡಿದ್ದಾರೆ.
ಇವರ ಸಾಹಿತ್ಯ ಕೃತಿಗಳಿಗೆ ಕುವೆಂಪು ಸಾಧಾನ ಪುರಸ್ಕಾರ, ಸಂಕ್ರಮಣ ಪ್ರಶಸ್ತಿ, ರಾಜಾವೆಂಕಟಪ್ಟನಾಯಕ ರಾಜ್ಯ ಪ್ರಶಸ್ತಿ ಹಾಗೂ ಅವರ ವೈವಿಧ್ಯಮಯವಾದ ಸಾಹಿತ್ಯ ಕೃಷಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ನಾಡಿನ ಪ್ರತಿಷ್ಟಿತ ಪತ್ರಿಕೆಗಳಲ್ಲಿ 150 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಡಾ.ರಂಗರಾಜ ವನದುರ್ಗ ಅವರು ಸ್ವತ ತಾವೇ 15 ಕ್ಕೂ ಹೆಚ್ಚು ರಾಜ್ಯ ಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾಗಿದಾರೆ.
ಅಲ್ಲದೆ ಇನ್ನೂರಕ್ಕೂ ಹೆಚ್ಚು ಪ್ರಬಂಧಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ, ಕಾರ್ಯಗಾರಗಳಲ್ಲಿ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮಂಡಿಸಿದ್ದಾರೆ. ಡಾ.ರಂಗರಾಜ ಅವರು ಯಾದಗಿರ ಜಿಲ್ಲಾ ಸುರಪುರ ತಾಲೂಕಿನಲ್ಲಿ ನಡೆದ 3 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆ ಸ್ಥಾನಕ್ಕೆ ತುಂಬಾ ಮಹತ್ವದ ಸ್ಥಾನವನ್ನು ತಂದು ಕೊಟ್ಟಿದ್ದಾರೆ.
ಬದುಕು, ಬರಹ ಮತ್ತು ವೃತ್ತಿ ಬದ್ಗತೆ ಇವುಗಳ ಸಮನ್ವತೆಯನ್ನು ಕಾಪಾಡಿಕೊಂಡಿರುವ ಡಾ.ರಂಗರಾಜ ವನದುರ್ಗ ಅವರು ಸಗರನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕುರಿತು ಆಳವಾಗಿ ಅರ್ಥೈಸಿಕೊಂಡಿದ್ದಾರೆ. ಅವರ ಬರಹ ಮತ್ತು ಚಿಂತನೆಗಳಲ್ಲಿ ಪರಂಪರೆಯಲ್ಲಿನ ಮೌಲ್ಯವನ್ನು, ಜನ ಸಮುದಾಯಗಳ ಬದುಕನ್ನು ಕುರಿತು ತುಂಬಾ ಕಾಳಜಿಯನ್ನು, ಪ್ರೇಮವನ್ನು ಹೊಂದಿದವರಾಗಿದ್ದಾರೆ. ತಮ್ಮ ಸಾಹಿತ್ಯದ ಕೃತಿಗಳಲ್ಲಿ ಜನಸಾಮಾನ್ಯರ, ಬಡವರ, ದೀನ ದಲಿತರ ದುಡಿಯುವ ವರ್ಗದವರ ಸಂವೇದನಗಳ ಮೂಲಕ ಸಮಾಜಕ್ಕೆ ಮುಖಾಮುಖಿಯಾಗಲು ಪ್ರಯತ್ನಿಸಿದ್ದಾರೆ.
ಸಮಾಜಿಕ ಪ್ರಜ್ಞೆವುಳ್ಳ ಲೇಖಕ, ಪ್ರಗತಿಪರ ವಿಚಾರವಂತರಾದ ಡಾ.ರಂಗರಾಜ ಅವರು ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಿರಿಯ-ಕಿರಿಯ ಲೇಖಕರರನ್ನೆಲ್ಲಾ ಪ್ರಭಾವಿಸಿದ ಸಾಹಿತಿಯಾಗಿದ್ದಾರೆ. ಸಂಸ್ಕೃತಿಯ ಬಹುಮುಖತೆಯನ್ನು ಗೌರವಿಸುತ್ತಾ, ಸಮಾಜದ ದುರ್ಬಲರ, ನಿರ್ಲಕ್ಷಿತ ಸಮುದಾಯಗಳ ಏಳ್ಗೆಯನ್ನು ಬಯಸುತ್ತ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸವ ವಿವೇಚಕರಾಗಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದೆ ನಡೆ-ನುಡಿಯಿಂದ ಪ್ಮ ಪ್ರಾಮಾಣಿ ಕತೆಯ ರೂಪಕವಾಗಿರುವರು.
ನಾಡಿನಾದ್ಯಂತ ಅಪಾರ ಪ್ರೀತಿಯ ಸ್ನೇಹ ವಲಯವನ್ನು, ವಿಧ್ಯಾರ್ಥಿಗಳ, ಸಹೃದಯರ, ಓದುಗರ ಪ್ರೀತಿಯನ್ನು ಕಟ್ಟಿಕೊಂಡು ಮನುಷತ್ತದ ಮಾನವೀಯ ಸಂಬಂಧಗಳಿಗೆ ಗಾಡ ಅರ್ಥವನ್ನು ತುಂಬುವ ಡಾ.ರಂಗರಾಜ ಅವರು, ತಮ್ಮ ಉತ್ತಮ್ಮ ಚಿಂತನಾಶೀಲ ಮಾತುಗಾರಿಕೆ, ವಿಶಿಷ್ಟ ವೈಚಾರಿಕ ಚಿಂತನೆಗಳ ಮೂಲಕ ಸಾಮಾಜಿಕ ಚಲನಶೀಲತೆಯನ್ನು ಬಯಸುತ್ತಾರೆ. ನಾಡು, ನುಡಿ, ನೆಲ, ಜಲ ಮುಂತಾದವುಗಳ ಕುರಿತು ನಡೆಯುವ ರಾಜ್ಯ, ರಾಷ್ಟ್ರಮಟ್ಟದ ವಿಚಾರಸಂಕೀರ್ಣಗಳಲ್ಲಿ, ಉಪನ್ಯಾಸಗಳಲ್ಲಿ, ಸಮ್ಮೇಳನಗಳಲ್ಲಿ ಬಹಳಷ್ಟು ಕ್ರೀಯಾಶಿಲತೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬದುಕು ಮತ್ತು ಬರಹಗಳಲ್ಲಿ ಜೀವಪರ, ಮಾನವೀಪರ ಕಾಳಜಿಗಳನ್ನು ಸಂವೇದನಗಳನ್ನು ಕಂಡು ಬರುತ್ತವೆ. ಪ್ರಸ್ತತ ಸಾಮಾಜಿಕ ವ್ಯವಸ್ಥೆಯಲ್ಲಿನ ಹಲವು ಸಮಸ್ಯೆಗಳಿಗೆ, ಆತಂಕಗಳಿಗೆ, ಒತ್ತಡಗಳಿಗೆ ತೀವ್ರವಾಗಿ ಪ್ರತಿಕ್ರಿಯಸುವ ಶ್ರೇಷ್ಠ ಚಿಂತಕರಾಗಿದ್ದಾರೆ.
ನಮ್ಮ ನಾಡಿನ ಸಾರಸ್ವತ ಲೋಕದ ವಿಶಿಷ್ಟ ಕಾಣಿಕೆಯಾಗಿರುವ ಹಾಗೂ ಮಾನವಿಯ ಅಂತ:ಕರಣವುಳ್ಳ ಸಾಹಿತಿ, ಚಿಂತಕ ಹಾಗೂ ವಿದ್ವಾಂಸರಾಗಿರುವ ಡಾ.ರಂಗರಾಜ ವನದುರ್ಗ ಅವರ ವಿದ್ವತ್ತು, ಸಾಧನೆ ನಮ್ಮ ನಾಡಿಗೆ ಹೆಮ್ಮೆ. ಅವರ ಸಾವಿರ ಸಾವಿರ ಸಾಧನೆಗಳ ಹಣತೆ ಬಾಳಿನಂಗಳದಲ್ಲಿ ಬೆಳಗಲಿ. ಸಾಧನೆಯ ಛಲದ ಹಂಬಲವುಳ್ಳ ಅವರು ಸಾತ್ವಿಕ ವ್ಯಕ್ತಿ ಶ್ರಮದಿಂದ ಇನ್ನೂ ಎತ್ತರಕ್ಕೇರಲಿ ಎಂದು ಹಾರೈಸೋಣ.
-ರಾಘವೇಂದ್ರ ಹಾರಣಗೇರಾ. ಲೇಖಕರು
ಸಮಾಜಶಾಸ್ತ್ರ ಉಪನ್ಯಾಸಕರು.
ಶಹಾಪುರ 9901559873.
ಸಗರನಾಡಿನ ಹೆಮ್ಮೆಯ ಪುತ್ರ ಅಷ್ಟೇ ಅಲ್ಲ ಒಬ್ಬ ಅಧ್ಭುತ ಕನ್ನಡ ಸಾಂಸ್ಕೃತಿಕ ಸರಕುದಾರ ಮತ್ತು ಅತ್ಯುತ್ತಮ ವಾಗ್ಮಿ ಡಾ.ರಂಗರಾಜ ವನದುರ್ಗ ಅವರ ಕುರಿತು ಸಮಗ್ರ ಮಾಹಿತಿಯೊಂದಿಗೆ ಅವರನ್ನು ಇನ್ನಷ್ಟು ಅರಿಯುವಂತೆ ಮಾಡಿದ ವಿನಯವಾಣಿಗೂ ಹಾಗೂ ಲೇಖಕ ರಾಘವೇಂದ್ರ ಹಾರಣಗೇರಾ ಅವರಿಗೂ ಅಭಿನಂದನೆಗಳು.
Nice information thanks sir