ಪ್ರಮುಖ ಸುದ್ದಿ
ಸಿ-ವೋಟರ್ ಸಮೀಕ್ಷೆಃ ಬಿಜೆಪಿಗೆ ಭರ್ಜರಿ ಗೆಲುವು ಸಾಧ್ಯತೆ
ಬಿಜೆಪಿ-10-12, ಕಾಂಗ್ರೆಸ್ಃ 03-06, ಜೆಡಿಎಸ್-01-02
ವಿವಿ ಡೆಸ್ಕ್ಃ ರಾಜ್ಯದ 15 ವಿಧಾನ ಸಭೆ ಉಪ ಚುನಾವಣೆಗೆ ಮತದಾನ ಗುರುವಾರ ಮುಗಿದಿದ್ದು, ಆಯಾ ಅಭ್ಯರ್ಥಿಗಳ ಬಲಾಬಲ ವಿವಿ ಪ್ಯಾಟ್ನಲ್ಲಿ ಸುಭದ್ರವಾಗಿ ಈಗಾಗಲೇ ಬಂಧಿಯಾಗಿದೆ. ಇನ್ನೇನು ಡಿ. 9 ರಂದು ಮತ ಎಣಿಕೆ ನಂತರವೇ ಗೆಲುವು ಸೋಲು ಕುರಿತು ತಿಳಿಯಲಿದೆ.
ಆದರೆ ಮತದಾನೋತ್ತರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಇದೀಗ ಜೋರಾಗಿಯೇ ನಡೆದಿದೆ.
ಸಿ-ವೋಟರ್ಸ್ ಪ್ರಕಾರ ಬಿಜೆಗೆ 9-12, ಕಾಂಗ್ರೆಸ್ ಗೆ 03-06, ಜೆಡಿಎಸ್ 00-01 ಸ್ಥಾನಗಳನ್ನು ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಸಿ-ವೋಟರ್ಸ್ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ಬರಲಿವೆ. ಬಿಜೆಪಿ ಸರ್ಕಾರ ಸ್ಥಿರವಾಗಿರಲಿದೆ ಎಂಬ ಮಾಹಿತಿಯನ್ನು ನೀಡಿದೆ.