ಪ್ರಮುಖ ಸುದ್ದಿ
ಕಾರು-ಲಾರಿ ಮುಖಾಮುಖಿ ಡಿಕ್ಕಿ ಇಬ್ಬರು ಸಜೀವ ದಹನ
ವಿವಿ ಡೆಸ್ಕ್ ಃ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಇಬ್ಬರು ಬೆಂಕಿಗೆ ಆಹುತಿಯಾಗಿದ್ದು, ಓರ್ವ ತೀವ್ರ ಗಾಯಗೊಂಡ ಘಟನೆ ತಮಿಳುನಾಡಿನ ಕೃಷ್ಣಾಗಿರಿ ಬಳಿ ಇದೀಗ ಸೋಮವಾರಾತ್ರಿ 11-30 ಸುಮಾರಿಗೆ ನಡೆದಿದೆ.
ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸಜಿವ ದಹನಗೊಂಡಿದ್ದಾರೆ. ಇನ್ನೋರ್ವ ತೀವ್ರಗಾಯಗೊಂಡಿದ್ದು, ಮೈಯೆಲ್ಲ ಸುಟ್ಟ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.