Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಚಿಕನ್ ಲಿವರ್ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..?

ಚಿಕನ್ ಪ್ರತಿಯೊಬ್ಬರು ಬಾಯಿ ಚಪ್ಪರಿಸುವವರೇ. ಅದರಲ್ಲೂ ಕೆಲವರಿಗೆ ಚಿಕನ್ ಲಿವರ್ ತುಂಬಾ ಇಷ್ಟ. ಚಿಕನ್ ಲಿವರ್ ನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಕೋಳಿ ಲಿವರ್ ನಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವಿದೆ. ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಇತರ ಕೆಲವೊಂದು ಅಂಶಗಳು ಕೂಡ ಇವೆ. ಚಿಕನ್ ಲಿವರ್ ನ್ನು ಮಿತವಾಗಿ ಸೇವನೆ ಮಾಡುತ್ತಲಿದ್ದರೆ ಆಗ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ನೆರವಾಗುವುದು.

ಚಿಕನ್ ಲಿವರ್ ನ ಆರೋಗ್ಯ ಲಾಭಗಳು ಚಿಕನ್ ಲಿವರ್ ಕೆಂಪು ಮಾಂಸವಲ್ಲ, ಕೋಳಿಯ ಒಂದು ಅಂಗದ ಮಾಂಸವಾಗಿದೆ. ಚಿಕನ್ ಲಿವರ್ ನಲ್ಲಿ ಹಲವಾರು ಬಗೆಯ ಪೋಷಕಾಂಶಗಳಾಗಿರುವಂತಹ ಫಾಲಟೆ, ಕಬ್ಬಿಣಾಂಶ ಮತ್ತು ಬಯೋಟಿನ್ ಇದೆ. ಇದು ದೇಹದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸಲು ತುಂಬಾ ಸಹಕಾರಿ ಆಗಿರುವುದು. ಫಾಲಟೆಯು ಫಲವತ್ತತೆ ಸಮಸ್ಯೆಯನ್ನು ದೂರವಿಡುವುದು ಮತ್ತು ಗರ್ಭಿಣಿಯರಲ್ಲಿ ಮಗುವನ್ನು ಯಾವುದೇ ಜನ್ಮವೈಕ ಲ್ಯಗಳು ಆಗದಂತೆ ನೋಡಿಕೊಳ್ಳುವುದು. ಕೋಲೀನ್ ಎನ್ನುವುದು ಹೆಚ್ಚಿನ ಜನರಿಗೆ ಸಿಗದೇ ಇರುವಂತಹ ಪೋಷ ಕಾಂಶವಾಗಿದ್ದು, ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಚಿಕನ್ ಲಿವರ್ ನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕೂಡ ಇದೆ. ಇದರಿಂದ ಸ್ನಾಯುಗಳು ಮತ್ತು ಮೂಳೆಯ ಆರೋಗ್ಯ ವನ್ನು ಕಾಪಾಡುವುದು ಹಾಗೂ ಗಾಯ ಗುಣಪಡಿಸಲು ಸಹಕಾರಿ. ಚಿಕನ್ ಲಿವರ್ ನಲ್ಲಿ ವಿಟಮಿನ್ ಎ ಮತ್ತು ಕಬ್ಬಿನಾಂಶವು ಇರುವ ಕಾರಣದಿಂದಾಗಿ ಇದು ಕೋಶಗಳ ಚಟುವಟಿಕೆ ಸುಧಾರಿಸುವುದು ಮತ್ತು ನೈಸರ್ಗಿಕವಾಗಿ ರಕ್ತಹೀನತೆ ತಡೆಯುವುದು.

ಇದು ದೇಹಕ್ಕೆ ಬೇಕಾಗಿರುವಂತಹ ವಿಟಮಿನ್ ಬಿ12 ನ್ನು ನೀಡುವುದು. ಇದು ಕೆಂಪು ರಕ್ತ ಕಣಗಳ ಉತ್ಪತ್ತಿಗೆ ನೆರವಾಗುವುದು. ಲಿವರ್ ನಲ್ಲಿ ಫಾಲಟೆ, ಕಬ್ಬಿನಾಂಶ ಮತ್ತು ವಿಟಮಿನ್ ಗಳು ಇರುವ ಕಾರಣದಿಂದ ಇದು ಸೇವನೆಗೆ ಯೋಗ್ಯವಾಗಿದೆ. ಕಬ್ಬಿನಾಂಶವು ದೇಹದಲ್ಲಿ ಕೆಂಪುರಕ್ತದ ಕಣಗಳನ್ನು ಉತ್ಪಾದಿಸಲು ಪ್ರಮುಖ ಪಾತ್ರ ವಹಿಸುವುದು. ಚಿಕನ್ ಲಿವರ್ ನಲ್ಲಿರುವ ಅಂಶವು ಕಣ್ಣಿನ ದೃಷ್ಟಿಗೆ ಒಳ್ಳೆಯದು. ಚಿಕನ್ ಲಿವರ್ ನಲ್ಲಿ ಶೇ.288ರಷ್ಟು ವಿಟಮಿನ್ ಎ ಇದೆ ಮತ್ತು ಇದು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಹೆಚ್ಚಿನ ನೆರವಾಗುವುದು. ಚಿಕನ್ ಲಿವರ್ ನಲ್ಲಿ ವಿಟಮಿನ್ `ಎ’ ಯು ರೆಟಿನಾಲ್, ಅಲ್ಪಾ ಮತ್ತು ಬೆಟಾ ಕ್ಯಾರೋಟಿನ್ ರೂಪದಲ್ಲಿದೆ. ವಿಟಮಿನ್ ಗಳಲ್ಲಿ ವಿಟಮಿನ್ ಎ ಪ್ರಮುಖವಾಗಿರುವಂತದ್ದಾಗಿದೆ ಮತ್ತು ಕಣ್ಣಿನ ದೃಷ್ಟಿಗೆ ಇದು ಅತೀ ಅಗತ್ಯವಾಗಿದೆ. ವಿಟಮಿನ್ `ಎ’ ಯಿಂದಾಗಿ ಕಣ್ಣಿನ ಪೊರೆ ಮತ್ತು ಅಕ್ಷಿಪಟಲದ ಅವನತಿಯನ್ನು ತಡೆಯುವುದು ಮತ್ತು ಅಕ್ಷಿಪಟಲದ ಉರಿಯೂತವನ್ನು ತಡೆಯುವುದು ಎಂದು ವೈಜ್ಞಾನಿಕ ವರದಿಗಳು ಹೇಳಿವೆ. ಚಿಕನ್ ಲಿವರ್ ನಲ್ಲಿನ ಪೋಷಕಾಂಶಗಳು.

ದೇಹವು ಪ್ರೋಟೀನ್ ನ್ನು ಉತ್ಪಾದಿಸಲು ಬೇಕಾಗಿರುವ ಪ್ರಮುಖ ಅಮಿನೋ ಆಮ್ಲಗಳು ಚಿಕನ್ ಲಿವರ್ ನಲ್ಲಿ ಇದೆ. ಅದೇ ರೀತಿಯಾಗಿ ವಿಟಮಿನ್ ಸಿ ಕೂಡ ಇದರಲ್ಲಿದ್ದು, ಇದು ಮಾಂಸಗಳಲ್ಲಿ ಕಂಡುಬರುವುದು ತುಂಬಾ ಕಡಿಮೆ. ವಿಟಮಿನ್ ಎ ಕೂಡ ಇದರಲ್ಲಿದ್ದು, ಕಣ್ಣುಗಳ ಆರೋಗ್ಯ ವನ್ನು ಇದು ಕಾಪಾಡುವುದು. ಕಬ್ಬಿಣಾಂಶವು ದೇಹಕ್ಕೆ ಶಕ್ತಿ ನೀಡುವುದು ಮತ್ತು ವಿಟಮಿನ್ ಬಿ12 ರಕ್ತಹೀನತೆ ಇರುವವರಿಗೆ ಚಿಕನ್ ಲಿವರ್ ಒಳ್ಳೆಯ ಆಯ್ಕೆಯನ್ನಾಗಿಸಿದೆ. ಇತರ ಮಾಂಸಗಳಿಗೆ ಹೋಲಿಕೆ ಮಾಡಿದರೆ, ಇದರಲ್ಲಿ ಒಳ್ಳೆಯ ಪ್ರಮಾಣದ ಕ್ಯಾಲರಿ ಇದೆ. 56-60 ಗ್ರಾಂ ಚಿಕನ್ ಲಿವರ್ ನಲ್ಲಿ 4 ಗ್ರಾಂ ಕೊಬ್ಬು ಮತ್ತು2 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 316 ಮಿ.ಗ್ರಾಂ. ಕೊಲೆಸ್ಟ್ರಾಲ್ ಮತ್ತು 94 ಕ್ಯಾಲರಿ ಇದೆ.

Related Articles

Leave a Reply

Your email address will not be published. Required fields are marked *

Back to top button