ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಅಗತ್ಯ – ಜಗನ್ನಾಥರಡ್ಡಿ

ಎಸ್‍ಪಿಸಿಯಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ- ಜಗನ್ನಾಥರಡ್ಡಿ
ಶಹಾಪುರ : ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆಯ ಅರಿವು ಮಾಡಿಕೊಡುವ ಕರ್ನಾಟಕ ಪೆÇಲೀಸ್ ಇಲಾಖೆಯ ಯೋಜನೆಯೇ ಎಸ್.ಪಿ.ಸಿ. ತುಂಬಾ ಉಪಯುಕ್ತವಾದದು ಎಂದು ತಹಶೀಲ್ದಾರ ಜಗನ್ನಾಥರಡ್ಡಿ ತಿಳಿಸಿದರು.

ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೂ ಸಣ್ಣ ಸಸಿಯಾಗಿರುವಾಗಲೇ ಗಿಡವನ್ನು ನಮಗೆ ಬೇಕಾದ ರೀತಿಯಲ್ಲಿ ಬೆಳೆಸಬಹುದು. ದೊಡ್ಡದಾದ ಮೇಲೆ ಅದನ್ನು ಹೇಗೆ ಬೇಕೋ ಹಾಗೆ ಬೆಳೆಸಲು ಸಾಧ್ಯವಿಲ್ಲ. ಸಣ್ಣ ಮಕ್ಕಳಿರುವಾಗಲೆ ಶಿಸ್ತು, ಸಂಯಮವನ್ನು ಮಕ್ಕಳು ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.

ಬಿಇಓ ರುದ್ರಗೌಡ ಪಾಟೀಲ್ ಮಾತನಾಡಿ, ಮಕ್ಕಳು ಪಾದರಸದಂತೆ ಚಟುವಟಿಕೆ ಉಳ್ಳವರು. ಮುಂದಿನ ಸಮಾಜದ ಹೊಣೆ ಹೊರುವ ನಾಗರಿಕರು. ಮೋಸ ವಂಚನೆ ಕಳ್ಳತನ ಮಾಡದಂತೆ ಎಸ್.ಪಿ.ಸಿ. ಅವರನ್ನು ತರಬೇತುಗೊಳಿಸುತ್ತದೆ. ಕೆಟ್ಟ ಚಟಗಳನ್ನು ಕಲಿಯದಂತೆ. ಕೆಟ್ಟದ್ದನ್ನು ಮಾಡದಂತೆ ತಿಳುವಳಿಕೆ ಮೂಡಿಸುತ್ತದೆ. ಇದರಲ್ಲಿ ಭಾಗವಹಿಸುವ ಮಕ್ಕಳಲ್ಲಿ ಶಿಸ್ತು, ಸಂತಮ ಕಾಣಬಹುದು ಇದಿರಂದ ಮುಂದಿನ ಅವರ ಬದುಕು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಪಿಐ ಹನುಮರಡ್ಡೆಪ್ಪ ಮಾತನಾಡಿ, ಪೆÇಲೀಸ್ ಇಲಾಖೆಗೆ ಸೇರಲು ಉತ್ತೇಜಿಸುವ ಎಸ್.ಪಿ.ಸಿ.ಯನ್ನು ಮಕ್ಕಳು ತುಂಬಾ ಅಚ್ಚು ಕಟ್ಟಾಗಿ ವರ್ಷದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಶಿಸ್ತು ಸಂಯಮ ಹಾಗೂ ಕ್ರಮಬದ್ಧತೆಯನ್ನು ರೂಢಿಸಿಕೊಂಡ ಹುಡುಗರು ಮುಂದೆ ಸಮಾಜಕ್ಕೆ ಮಾ ಎಂದು ಸಭೆಯಲ್ಲಿ ಮಾದರಿಯಾಗಲಿದ್ದಾರೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಚಿಂತಕ, ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಹಣ, ಬಂಗಾರ, ಭೂಮಿ ಆಸ್ತಿ ಅಲ್ಲವೇ ಅಲ್ಲ. ನಮ್ಮಲ್ಲಿರುವ ಜ್ಞಾನವೇ ಬಹುದೊಡ್ಡ ಆಸ್ತಿ. ಸ್ವತಂತ್ರವಾಗಿ ಆಲೋಚಿಸಿ, ಮುಕ್ತವಾಗಿ ವರ್ತಿಸಿ, ಸಮಾಜದ ಕಟ್ಟು ಪಾಡುಗಳು ಮಹಾತ್ಮರನ್ನು ಸೃಷ್ಟಿಸುವುದಿಲ್ಲ. ಅವು ಕೇವಲ ನಾಗರಿಕರನ್ನು ತಯಾರಿಸುತ್ತವೆ. ನಿಮಗೆ ನೀವೇ ಮಾರ್ಗದರ್ಶಕರಾಗಿ, ಯಾವ ಕೆಟ್ಟ ಹವ್ಯಾಸಗಳ ರೂಢಿಸಿಕೊಳ್ಳದಿರಿ. ಉತ್ತಮರ ಸಂಗ ಮಾಡಿ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದು ಮಾರ್ಮಿಕವಾಗಿ ವಿವರಿಸಿದರು.

ಇದೆ ಸಂದರ್ಭದಲ್ಲಿ ಮಾಜಿ ಸೈನಿಕರಾದ ಎಸ್.ಎಂ.ಜಾನಿ ಮತ್ತು ಮರೆಪ್ಪ ಚಂಡು ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಸುಧಾಕರ ಗುಡಿ ಹಳಿಸಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪ್ಪಣ್ಣ ಧೋತ್ರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ.ಶಿ.ಸಿದ್ದಪ್ಪ ಪ್ರಾರ್ಥಿಸಿದರು. ಶರಶ್ಚಂದ್ರ ಅಂಬಲಗಿ ನಿರೂಪಿಸಿದರು. ವೇದಿಕೆಯ ಮೇಲೆ ಎಸ್.ಪಿ.ಸಿ.ಯ ಮೋಹಿನಖಾನ ಉಪಸ್ಥಿತರಿದ್ದರು. ಸಭೆಯಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button