ಪ್ರಮುಖ ಸುದ್ದಿ

ಶಹಾಪುರ ಜನರಲ್ ಮರ್ಚಂಟ್ಸ್ ವತಿಯಿಂದ ದಿನಬಳಕೆ ಸಾಮಾಗ್ರಿ ವಿತರಣೆ

ಶಹಾಪುರ ಜನರಲ್ ಮರ್ಚಂಟ್ಸ್ ವತಿಯಿಂದ ದಿನಬಳಕೆ ಸಾಮಾಗ್ರಿ ವಿತರಣೆ
ಶಹಾಪುರಃ ಲಾಕ್ ಡೌನ್ ನಿಂದಾಗಿ‌ ನಗರದ ಡಿಗ್ರಿ ಕಾಲೇಜು ಆವರಣದಲ್ಲಿ ತಂಗಿರುವ ಮಹಾರಾಷ್ಟ್ರ ಮೂಲದ 220 ಜನ ಕಾರ್ಮಿಕರಿಗೆ ಇಲ್ಲಿನ ಜನರಲ್ ಮರ್ಚಂಟ್ಸ್ ವತಿಯಿಂದ ದಿನ ಬಳಕೆ ವಸ್ತುಗಳಾದ ಬ್ರಶ್, ಪೇಸ್ಟ್, ಸಾಬೂನು ಸೆರಿದಂತೆ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು.

ಎಲ್ಲೆಡೆ ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿದ್ದ ಹಿನ್ನೆಲೆ ಇಡಿ ದೇಶ ಲಾಕ್ ಡೌನ್ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಗುಳೆ ಹೋದವರು ವಾಪಾಸ್ ಅವರ ವರ ಊರಿಗೆ ಮರಳುತ್ತಿರುವ ಸಂದರ್ಭ ಕೆಲವಡೆ ಕಾರ್ಮಿಕರು ಸಿಲುಕಿ ಆಯಾ ಸ್ಥಳಗಳಲ್ಲಿ ಲಾಕ್ ಡೌನ್ ಗೆ ಒಳಪಟ್ಟಿದ್ದು, ಮಹಾರಾಷ್ಟ್ರ ದ ಬೀಡ್ ಜಿಲ್ಲೆಯವರಾದ 220 ಜನರು ತಮಿಳುನಾಡಿಗೆ ಕಬ್ಬು‌ ಕಟಾವ್ ಗೆ ಹೋಗಿದ್ದರು.

ಲಾಕ್ ಡೌನ್ ಮೇರೆಗೆ ವಾಪಾಸ್ ಮಹಾರಾಷ್ಟ್ರ ಕ್ಕೆ ತೆರಳುತ್ತಿರುವ ಸಂದರ್ಭ ಶಹಾಪುರ ನಗರಕ್ಕೆ ಆಗಮಿಸಿ‌ ಸಿಲುಕಿದ್ದಾರೆ. ಮುಂದೆ ಸಾಗಲು ಅವರಿಗೆ ಆಗಲಿಲ್ಲ. ಎಲ್ಕಡೆ ರಸ್ತೆ ಬಂದ್ ಮಾಡಿದ‌ ಕಾರಣ ಇಲ್ಲಿಯೇ ಅವರಿಗೆ ಇರಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರರು ತಿಳಿಸಿದರು.

ಸಾಮಾಗ್ರಿ ಕಿಟ್ ವಿತರಣೆ ಸಂದರ್ಭ ಜನರಲ್ ಮರ್ಚಂಟ್ ಮಾಲೀಕರಾದ ಜಗಧೀಶ ಹೊನ್ಕಲ್,ವಿಶ್ವನಾಥ ಜವಳಿ, ಕೈಲಾಸ ಪಡಶಟ್ಟಿ, ಆಸೀಫ್ ಸರ್ಜಾಬಾದಿ, ಚಂದು ಜವಳಿ, ರಾಜು ಚಂಡು, ವಿಕ್ರಮ ಜೈನ್, ಅಂಬಿಕಾ ಜನರಲ್ ಸ್ಟೋರ್, ಖೈಯ್ಯೂಮ್, ಫೈಮ್ ಖಾಜಿ, ಸಿರಾಜ್ ಮದಾರಿ, ರವಿ‌ ಕರಕಳ್ಳಿ, ಇಮ್ರಾನ್ ಸರ್ಜಾಬಾದಿ ಸೇರಿದಂತೆ ತಹಸೀಲ್ದಾರ ಜಗನ್ನಾಥ್ ರಡ್ಡಿ, ಕಂದಾಯ ನಿರೀಕ್ಷಕ ಗಿರೀಶ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button