ಕನಸಲ್ಲಿ ನೆಲಕ್ಕೆಸೆದಳು ಹಾಲಿನ ಪಾತ್ರೆ
ದಿನಕ್ಕೊಂದು ಕಥೆ
ಹಾಲಿನ ಹುಡುಗಿ
ಒಂದು ಹಳ್ಳಿಯಲ್ಲಿ ಹಾಲು ಮಾರುವ ಹುಡುಗಿಯೊಬ್ಬಳಿದ್ದಳು. ಒಂದು ದಿನ ತಾಯಿ ಕೊಟ್ಟ ಹಾಲನ್ನು ಮಾರಿಬರಲು ನಗರಕ್ಕೆ ಹೋದಳು. ಹಾಲಿನ ಪಾತ್ರೆಯನ್ನು ತಲೆಯ ಮೇಲಿಟ್ಟುಕೊಂಡು ನಿಧಾನವಾಗಿ ಹೋಗುತ್ತಿದ್ದಾಗ ಅವಳ ಯೋಚನಾಲಹರಿ ಬೆಳೆದಿತ್ತು –
“ಈ ಹಾಲು ಮಾರಿ ಬಂದ ಹಣದಲ್ಲಿ ಏನು ಮಾಡಲಿ ?” ಒಂದು ಹತ್ತು ಕೋಳಿ ಖರೀದಿಸುವೆ. ಆಗ ಕೋಳಿಗಳು ಮೊಟ್ಟೆ ಹಾಕುತ್ತವೆ. ಮೊಟ್ಟೆಗಳನ್ನೆಲ್ಲ ಮಾರುತ್ತೇನೆ. ಆಗ ಕೈ ತುಂಬ ಹಣ ಬರುತ್ತದೆ.
“ಆ ಹಣ ಜಾಸ್ತಿಯಾದಾಗ ಒಳ್ಳೆಯ ಹಸಿರು ರೇಶ್ಮೆ ಸೀರೆ ತರುವೆ” ಎಂದಾಗ ಆನಂತರ ಅದನ್ನುಟ್ಟುಕೊಂಡು ಸಂತೆಗೆ ಹೋಗುವೆ. ಆಗ ಹಲವಾರು ಹುಡುಗ ಹುಡುಗಿಯರು ನನ್ನ ಬಳಿ ಸುತ್ತುಕೊಳ್ಳುತ್ತಾರೆ.
ಆಗ ಎಲ್ಲರನ್ನೂ ಮಾತನಾಡಿಸಲು ನಾನೂ ಠೀವಿಯಿಂದಲೇ ಕತ್ತನ್ನು ಹಾಗೇ ತಿರುಗಿಸುತ್ತ ಎಂದುಕೊಳ್ಳುತ್ತಲೇ ಮೈ ಮರೆತು ತಲೆ ತಿರುಗಿಸಿಯೇ ಬಿಟ್ಟಲು ಆಗ ತಲೆ ಮೇಲಿರುವ ಹಾಲಿನ ಪಾತ್ರೆ ಕೆಳಗೆ ಬಿದ್ದು. ಹಾಲೆಲ್ಲ ಚೆಲ್ಲಿ ಹೋಯಿತು. ಇನ್ನು ತಾಯಿಯ ಬೈಗಳು ಕೇಳ ಬೇಕಲ್ಲಾ ಎಂದು ಅಳುತ್ತಲೇ ಅವಳು ಹಳ್ಳಿಗೆ ಹಿಂದಿರುಗಿದಳು.
ನೀತಿಃ ಕಾಯಕದಲ್ಲಿ ಶ್ರದ್ಧೆ ಇರಲಿ. ಇನ್ನು ಕನಸು ಕಾಣಿ ಹಗಲುಗನಸು ಕಾಣಬೇಡಿ
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.