ಕೋವಿಡ್ 19 ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಭೆ
ಕೋವಿಡ್ 19 ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಭೆ
yadgiri- ಪ್ರಸ್ತುತ ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲಿನ ಕೋವಿಡ್ 19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದರಿ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಸಂಬಂಧ ದಿನಾಂಕ 31.7.2021 ರಂದು ಸರ್ಕಾರ ಹೊರಡಿಸಿದ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು
ಕೇರಳ ಮಹಾರಾಷ್ಟ್ರ ದಿಂದ ಬರುವವರು ಕೋವಿಡ್ 19 ಲಸಿಕೆಯ ಡೋಸ್ ಗಳನ್ನು ಪಡೆದಿದ್ದರೂ/ ಪಡೆಯದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ
ವಿಮಾನ ರೈಲು ರಸ್ತೆ ಮಾರ್ಗ ಮತ್ತು ಇತರ ಸ್ವಂತ ವಾಹನಗಳ ಮುಖಾಂತರ ಆಗಮಿಸುವ ಪ್ರಯಾಣಿಕರಿಗೆ ಇದು ಅನ್ವಯವಾಗುತ್ತದೆ ಪ್ರಯಾಣಿಕರ ನೆಗೆಟಿವ್ ಪರೀಕ್ಷಾ ವರದಿಗಳನ್ನು ಖಚಿತಪಡಿಸಿಕೊಳ್ಳುವುದು ಆಯಾ ಪ್ರಾಧಿಕಾರಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು. ಯಾದಗಿರಿ ಜಿಲ್ಲೆಯಲ್ಲಿ ಸ್ಥಾಪಿಸಿದ 8 ಚೆಕ್ ಪೆÇೀಸ್ಟ್ ಗಳಾದ ಯರಗೋಳ ಮುಡಬೂಳ ಮಲ್ಲಾ (ಬಿ ) ತಿಂಥಣಿ ಗುರುಮಿಟಕಲ್ ಕುಂಟಿಮರಿ ನಾರಾಯಣಪುರ ಮಾಳನೂರ ಗಳಲ್ಲಿ ಪೆÇಲೀಸ್ ಆರೋಗ್ಯ ಕಂದಾಯ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ಮೂರು ಪಾಳೆಯಲ್ಲಿ ನಿಯೋಜಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸಲು ತಿಳಿಸಿದರು.
ಚೆಕ್‍ಪೆÇೀಸ್ಟ್ ಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಉಪಕರಣದಿಂದ ತಪಾಸಣಿ ಕೈಗೊಳ್ಳಬೇಕು. ಎಲ್ಲ ಚೆಕ್ ಪೆÇೀಸ್ಟ್ ಗಳು ಕಡ್ಡಾಯವಾಗಿ ಕಾರ್ಯೋನ್ಮುಖವಾಗುವಂತೆ ಆಯಾ ತಾಲೂಕಿನ ತಹಶೀಲ್ದಾರರು ನೋಡಿಕೊಳ್ಳಬೇಕು. ಸಹಾಯಕ ಆಯುಕ್ತರು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಹೇಳಿದರು. ಚೆಕ್ ಪೆÇೀಸ್ಟ್ ಗಳಲ್ಲಿ ನಿಯೋಜನೆಯಾದ ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಏನಾದರೂ ಲೋಪಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.