
ಸೆ.30 ಕ್ಕೆ ಶೋಲಾ ಫೌಂಡೇಶನ್‍ನಿಂದ ಪ್ರಶಸ್ತಿ ಪ್ರಧಾನ ಸಮಾರಂಭ
ಶೋಲಾ ಫೌಂಡೇಶನ್ ಸಮಾರಂಭ
yadgiri, ಶಹಾಪುರಃ ನಗರದ ಶೋಲಾ ಫೌಂಡೇಶನ್ ಪ್ರತಿ ವರ್ಷದಲ್ಲಿ ಈ ಬಾರಿಯು ಜಿಲ್ಲಾ ಮಟ್ಟದ ಉತ್ತಮ ಉರ್ದು ಹಾಗೂ ಕನ್ನಡ ಪತ್ರಿಕೆ ವರದಿಗಾರರು ಮತ್ತು ಉರ್ದು ಪ್ರೌಢ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ಸೇ.30 ರಂದು ಶೋಲಾ ಐಸ್ ಫ್ಯಾಕ್ಟರಿ ಮೇಲಗಡೆ ಸಭಾಂಗಣದಲ್ಲಿ ಮದ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಫೌಂಡೇಶನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಉರ್ದು ಪ್ರೌಢ ಶಾಲೆಯ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಮತ್ತು ಶಿಕ್ಷಕಿಯರನ್ನು ಫೌಂಡೇಶನ್ ಸಮಿತಿ ಆಯ್ಕೆ ಮಾಡಿದೆ. ಅದೇ ರೀತಿ ಜಿಲ್ಲಾ ಮಟ್ಟದ ಉತ್ತಮ ವರದಿಗಾರರಾಗಿ 2024-25 ನೇ ಸಾಲಿನ ಉತ್ತಮ ವರದಿಗಾರ ಪ್ರಶಸ್ತಿಗೆ ಯಾದಗಿರಿಯ ಮುಬೀನಹ್ಮದ್ ಜಖ್ಮ ಮತ್ತು ಸಯ್ಯದ್ ಸಾಜಿದ್ ಹಯಾತ್ ಸೇರಿದಂತೆ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಶೇಖ ಮುಕ್ತಾಯರ್ ಅಹ್ಮದ್ ಅವರನ್ನು ಆಯ್ಕೆಗೊಳಿಸಿದೆ ಎಂದು ತಿಳಿಸಿದ ಅವರು, ಉತ್ತಮ ಶಿಕ್ಷಕ, ಶಿಕ್ಷಕಿಯರ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಸಮಾರಂಭದಂದು ಪ್ರಶಸ್ತಿ ಪ್ರಧಾನ ಮಾಡಲಾಗುವದು.
ದಿ.ಉರ್ದು ಕವಿ ಅಲ್‍ಹಜ್ ಸಯ್ಯದ್ ಫಜಲರುಹೆಮಾನ್ ಶೋಲಾ ಇವರ ಮಗ ಅಲ್‍ಹಜ್ ಸಯ್ಯದ್ ಜಿಯಾವುರಹೆಮಾನ್ ಇವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದ್ದು, ಉರ್ದು ಭಾಷೆ ಪ್ರೇಮಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ನಿವೃತ್ತ ಉರ್ದು ಶಿಕ್ಷಕ ಶಿರಾಜ್ ಅಹ್ಮದ್ ತಿಳಿಸಿದ್ದಾರೆ.
———–