ಶ್ರೀಮಹಾಲಕ್ಷ್ಮೀ ವಿಶೇಷ ಪೂಜಾ, ಅನ್ನ ಸಂತರ್ಪಣೆ
ಶಹಾಪುರಃ ಪ್ರತಿ ವರ್ಷದಂತೆ ಪವಿತ್ರ ಶ್ರಾವಣ ಮಾಸದ ಕೊನೆ ಭಾನುವಾರ ದಿನ ಇಲ್ಲಿನ ಬೆಟ್ಟದ ಸಿದ್ಧಲಿಂಗೇಶ್ವರ ಪರಿಸರದಲ್ಲಿ ವನ ಭೋಜನ ಕಾರ್ಯಕ್ರಮ ನಡೆಸಲಾಗುತ್ತದೆ. ಅದರಂತೆ ಈ ವರ್ಷವು ಇಲ್ಲಿನ ಪರಿಸರದಲ್ಲಿ ವನ ಭೋಜನ ಜರುಗಿತು.
ಶ್ರಾವಣ ಮಾಸ ಕೊನೆ ಶುಕ್ರವಾರ ಇಲ್ಲಿನ ಶ್ರೀ ಮಹಾಲಕ್ಷ್ಮೀದೇವಿ ವಿಶೇಷ, ಅಭಿಷೇಕ, ಪೂಜೆಯನ್ನು ಮಹಾಲಕ್ಷ್ಮೀ ಭಕ್ತ ಮಂಡಳಿ ನಡೆಸುತ್ತದೆ. ಶುಕ್ರವಾರ ವಿಶೇಷ ಧಾರ್ಮಿಕ ಪೂಜೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮುಗಿಸಿದ ನಂತರ ರವಿವಾರ ಭಕ್ತ ಮಂಡಳಿ ಸಾರ್ವಜನಿಕವಾಗಿ ವನ ಭೋಜನ ನಡೆಸುತ್ತಾ ಬರಲಾಗುತ್ತಿದೆ.
ಅದರಂತೆ ರವಿವಾರ ವನಭೋಜನ ಆಯೋಜಿಸಲಾಗಿತ್ತು. ಸಾವಿರಾರು ಜನ ಶ್ರೀಮಹಾಲಕ್ಷ್ಮೀ ದೇವಿಯ ದರ್ಶನ ಪಡೆದು ಭೋಜನ ಸವಿದರು. ಹಸಿರು ಪರಿಸರದಲ್ಲಿ ಭಕ್ತಿಪೂರ್ವ ಪ್ರಸಾದ ಸೇವನೆ ಮಾಡುದರಲ್ಲಿ ಮಗ್ನರಾಗಿದ್ದ ಜನರು ಶ್ರೀಮಹಾಲಕ್ಷ್ಮೀ ದೇವಿ ಕೃಪೆಗೆ ಪಾತ್ರರಾದರು.
ಸ್ವಯಂ ಪ್ರೇರಣೆಯಾಗಿ ಭಕ್ತಾಧಿಗಳು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಭೋಜನೆಕ್ಕೆ ಆಗಮಿಸಿದ ಭಕ್ತರಿಗೆ ಹುಗ್ಗಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟೆ, ಅನ್ನ ಸಾಂಬಾರು, ಕಾಳು ಪಲ್ಯೆ, ಭಜಿ ಮೊಸರು ಚಟ್ನಿ ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.