ಇಂದಿನ ರಾಶಿಫಲ ನೋಡಿ ಮುನ್ನಡೆಯಿರಿ
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಆಶೀರ್ವಾದದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಶ್ರಾವಣ
ಋತು : ಗ್ರೀಷ್ಮ
ರಾಹುಕಾಲ 10:54 – 12:31
ಗುಳಿಕ ಕಾಲ 07:39 – 09:16
ಸೂರ್ಯೋದಯ 06:01:14
ಸೂರ್ಯಾಸ್ತ 19:01:10
ತಿಥಿ : ಚತುರ್ಥಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ನಡೆ-ನುಡಿ ಭೂಷಣ ಎಲ್ಲವನ್ನು ಜನರು ಗಮನಿಸುವವರು ಆದಕಾರಣ ಶುದ್ಧತೆ ವಿನಯತೆಯಿಂದ ನಡೆದುಕೊಳ್ಳಿ. ನಿಮ್ಮ ಮನಸ್ಸಿನ ಮಾತನ್ನು ಆಲಿಸಿ ವ್ಯವಹಾರದಲ್ಲಿ ಪಾಲ್ಗೊಳ್ಳಿ. ಕಾರ್ಯಗಳ ಹೆಚ್ಚಿನ ಒತ್ತಡದಿಂದ ದೈಹಿಕ ಕ್ಷಮತೆ ಕುಂದಬಹುದು ಇದರಿಂದ ನಿರೀಕ್ಷಿತ ಕಾರ್ಯಗಳನ್ನು ಮಾಡಲು ಕಷ್ಟವಾಗಬಹುದಾದ ಸಾಧ್ಯತೆ ಇದೆ. ಕೌಟುಂಬಿಕ ಕಲಹಗಳನ್ನು ಶಮನಗೊಳಿಸಲು ಪ್ರಯತ್ನಿಸಿ. ದಾಂಪತ್ಯದಲ್ಲಿ ಉದ್ಭವವಾಗುವ ಮನಸ್ತಾಪಗಳನ್ನು ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡಬಹುದಾದ ಸಾಧ್ಯತೆ ಕಂಡು ಬರುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಷಭ ರಾಶಿ
ಬೃಹತ್ ಅವಕಾಶಗಳು ನಿಮ್ಮ ಆತ್ಮೀಯ ವರ್ಗದವರು ನಿಮಗೆ ನೀಡುವ ಸಾಧ್ಯತೆ ಇದೆ. ಜಂಟಿ ವ್ಯವಹಾರದಲ್ಲಿ ಯೋಚಿಸಿ ಮುಂದುವರಿಯುವುದು ಒಳಿತು. ಆರ್ಥಿಕ ವ್ಯವಸ್ಥೆಯಲ್ಲಿ ನಿರೀಕ್ಷಿತ ಫಲಿತಾಂಶ ಕಾಣಲಿದ್ದೀರಿ. ಮಕ್ಕಳ ಕೆಲವು ನಡೆ ನಿಮ್ಮ ಮನಃಶಾಂತಿ ಕದಡಬಹುದು. ಕುಟುಂಬಸ್ಥರ ಬೇಕು-ಬೇಡಗಳ ಪೂರೈಸುವ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮಕ್ಕಳ ಬೆಳವಣಿಗೆಯಿಂದ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಅವಕಾಶ ಸಿಗಲಿದೆ. ಕುಟುಂಬದಲ್ಲಿ ಶುಭಕರ ಸುದ್ದಿ ಆಲಿಸುವಿರಿ. ನಿಮ್ಮ ಕನಸಿನ ಬಯಕೆಗಳು ಈಡೇರಲು ಕಾರ್ಯಪ್ರವೃತ್ತರಾಗಬೇಕಾಗಿದೆ. ವಿರೋಧಿಗಳು ಅಪಪ್ರಚಾರದ ಮಾತುಗಳಿಂದ ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಸಹಾಯಕ್ಕೆ ಯಾರೂ ಬರದೇ ಇರುವ ಸಾಧ್ಯತೆ ಇದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಉತ್ತಮವಾದ ಲಾಭಗಳಿಸಬಹುದು. ಸಾಲ ನೀಡುವ ಗೋಜಿಗೆ ಹೋಗಬೇಡಿ. ಕುಟುಂಬಸ್ಥರು ನಿಮ್ಮ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಆರ್ಥಿಕವಾಗಿ ಇಂದು ಉತ್ತಮ ಸಾಧನೆಯಾಗಲಿದೆ. ಚೈತನ್ಯದಾಯಕ ವ್ಯಕ್ತಿತ್ವವನ್ನು ಕಾಣಬಹುದು. ನಂಬಿಕಸ್ಥ ವ್ಯಕ್ತಿಗಳಿಂದ ಸಮಸ್ಯೆಗೆ ಸಿಲುಕಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ನೀವು ಇನ್ನೊಬ್ಬರನ್ನು ಅವಲಂಬಿಸದೆ ಸ್ವಂತಿಕೆ ನಿರ್ಧಾರಗಳಿಂದ ಜೀವನವನ್ನು ಪ್ರಾರಂಭಿಸಬಹುದು. ಹೂಡಿಕೆಗಳ ವಿಷಯದಲ್ಲಿ ಜಾಗ್ರತೆ ಅವಶ್ಯಕ. ರುಚಿಕರ ಭೋಜನದ ಸಿದ್ಧತೆ ಮನೆಯಲ್ಲಿ ನಡೆಯಬಹುದು. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಸಾಮಾಜಿಕ ಅಥವಾ ರಾಜಕೀಯ ಕಾರ್ಯಗಳಲ್ಲಿ ಸಕ್ರಿಯರಾದವರಿಗೆ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿನಾಕಾರಣ ವಿರೋಧಿಗಳು ನಿಮ್ಮನ್ನು ಅನುಮಾನದಿಂದ ನೋಡಬಹುದಾದ ಸಾಧ್ಯತೆ ಇದೆ, ಅವರ ನಡೆಯನ್ನು ಕಡೆಗಣಿಸುವುದು ಸೂಕ್ತ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಸಾಲ ವಸೂಲಾತಿಗಾಗಿ ಹೆಚ್ಚಿನ ತಿರುಗಾಟ ಮತ್ತು ಶ್ರಮದಾಯಕ ದಿನವನ್ನು ಕಳೆಯುವಿರಿ. ನೆಂಟರ ಆಗಮನದಿಂದ ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಆಲಸ್ಯತನ ಮಾಡಬೇಡಿ, ಇದರಿಂದ ಬಹಳಷ್ಟು ನಷ್ಟ ಆಗುವ ಸಾಧ್ಯತೆ ಇದೆ. ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಹಲವು ಸಂಪರ್ಕಗಳನ್ನು ಹಾಗೂ ಒಡನಾಟವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ. ದೈವ ದೇಗುಲಗಳ ಭೇಟಿನೀಡುವ ಅವಕಾಶ ಪಡೆಯುವಿರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ತುಲಾ ರಾಶಿ
ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳಾಗಿ ಪಾಲ್ಗೊಳ್ಳಬೇಡಿ, ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನಿಮ್ಮ ಬಾಳ ಸಂಗಾತಿ ಯಿಂದ ಹಲವು ವಿಷಯವನ್ನು ಇಂದು ಕಲಿಯಲು ಅವಕಾಶ ಸಿಗಲಿದೆ. ಕೆಲಸದ ಬಗೆಗಿನ ನಿಮ್ಮ ಶ್ರದ್ಧೆ ಜಾಣ್ಮೆಯು ಎಲ್ಲರಿಗೂ ಪರಿಚಯ ಆಗಲಿದೆ ಇದರಿಂದ ನಿಮ್ಮ ಸ್ಥಾನ ಹಾಗೂ ಪ್ರಶಂಸೆ ಹೆಚ್ಚಾಗಲಿದೆ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಇಂದು ಅತಿ ಲವಲವಿಕೆಯಿಂದ ಪಾಲ್ಗೊಳ್ಳಲಿದ್ದೀರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮದೇ ಸರಿ ಎಂಬ ವಿತಂಡವಾದಗಳು ಬೇಡ ಎಲ್ಲವನ್ನು ವಿಮರ್ಶೆ ಮಾಡಿ ನಂತರ ಒಪ್ಪಿಕೊಳ್ಳಿ. ಕೋಪತಾಪಗಳಿಂದ ನಿಮ್ಮ ವ್ಯಕ್ತಿತ್ವ ಹಾಗೂ ಆರೋಗ್ಯ ನಾಶಗೊಳ್ಳಬಹುದು ಸಮಾಧಾನಚಿತ್ತದಿಂದರಿ. ಸಾಧ್ಯವಾದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ. ವಿನಾಕಾರಣ ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುತ್ತಾ ಸಮಯ ಹಾಳು ಮಾಡಬೇಡಿ. ಆರ್ಥಿಕ ವಿಷಯದಲ್ಲಿ ನೀವಾಡುವ ಕೆಲವು ಮಾತುಗಳು ಸಂಕಷ್ಟಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕಂಕಣ ಬಲವು ಶೀಘ್ರವಾಗಿಯೇ ನಿಮಗೆ ಕೂಡಿಬರಲಿದೆ. ಪ್ರೇಮಿಗಳಲ್ಲಿ ಉತ್ಸಾಹದ ವಾತಾವರಣ ಇಂದು ಕಾಣಬಹುದು. ಮಿತ್ರರ ಆಗಮನದಿಂದ ವೈಯಕ್ತಿಕ ಖರ್ಚುಗಳು ಹೆಚ್ಚಾಗಬಹುದು, ಹಾಗೂ ಸಂಜೆಯ ವಾತಾವರಣ ಮೋಜಿನಿಂದ ಕೂಡಿರಲಿದೆ. ನಿಮ್ಮ ಮಾತಿನ ಶೈಲಿಗೆ ಅಧಿಕಾರಸ್ಥರು ಮರುಳಾಗುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಮನೆ ನಿರ್ಮಾಣದ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ಹಿರಿಯರ ಕೆಲವು ಅಗತ್ಯತೆಗಳನ್ನು ಕಡೆಗಣಿಸಬೇಡಿ. ನಿರೀಕ್ಷಿತ ಯೋಜನೆಗಳಿಗೆ ಪೂರ್ಣಪ್ರಮಾಣದ ತಯಾರಿ ನಡೆಸುವುದು ಒಳ್ಳೆಯದು. ಆರ್ಥಿಕ ಸ್ಥಿತಿಯಲ್ಲಿ ನಿಧಾನವಾದ ಪ್ರಗತಿ ಕಾಣಬಹುದು. ನಿಮ್ಮ ಕೆಲವು ಧೋರಣೆಗಳನ್ನು ತೆಗೆದುಹಾಕಿ ವ್ಯಕ್ತಿತ್ವವನ್ನು ಸ್ನೇಹಯುತವಾಗಿ ಮಾಡಿಕೊಳ್ಳುವುದು ಒಳ್ಳೆಯದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕುಂಭ ರಾಶಿ
ಆಡಿದ ಮಾತು ಹಿಂದೆ ಪಡೆಯಲು ಸಾಧ್ಯವಿಲ್ಲ, ಆದಕಾರಣ ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಿ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ದೋಷಾರೋಪಣೆ ಮಾಡಬಹುದಾದ ಸಾಧ್ಯತೆಯಿದೆ. ಮನೆಯ ಸದಸ್ಯರೊಡನೆ ವಾದ ವಿವಾದದಲ್ಲಿ ತೊಡಗಬೇಡಿ. ಗೃಹ ಕಾರ್ಯದಲ್ಲಿ ಕೆಲವು ಅಡೆತಡೆಗಳು ಬರಬಹುದಾದ ಸಾಧ್ಯತೆ ಇದೆ. ಕೆಲಸದಲ್ಲಿ ಚೈತನ್ಯ ಮತ್ತು ಶ್ರದ್ಧೆಯನ್ನು ತೋರಿಸುವುದು ಒಳ್ಳೆಯದು.
ಶುಭ ಸಂಖ್ಯೆ 8
ಗಿರಿದರ ಶರ್ಮ 9945098262
ಮೀನಾ ರಾಶಿ
ಸಭೆ-ಸಮಾರಂಭಗಳನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ನಿಮ್ಮ ವಾಕ್ಯ ಚಾತುರ್ಯದಿಂದ ಪ್ರಶಂಸೆ ಸಂಪಾದಿಸುತ್ತೀರಿ. ಹೊಸ ವ್ಯಕ್ತಿಗಳೊಡನೆ ಹೆಚ್ಚಿನ ಒಡನಾಟ ಇಂದು ಬೆಳೆಸಬಹುದಾದ ಸಾಧ್ಯತೆ ಇದೆ. ನಿಮ್ಮ ಆರೋಗ್ಯವನ್ನು ಮುತುವರ್ಜಿಯಿಂದ ಕಾಪಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ನಡೆ ಗರ್ವದಿಂದ ಕೂಡಿರಬಹುದು, ಇದು ಹತ್ತಿರದ ಜನಗಳಿಗೆ ಮತ್ಸರ ತರಬಹುದಾದ ವಿಷಯವಾಗಿದೆ ಆದಕಾರಣ ನಿಮ್ಮ ಸ್ವಭಾವ ಬದಲಾಯಿಸಿಕೊಳ್ಳಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ಸನ್ನದ್ಧರಾಗಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು
9945098262