ಪ್ರಮುಖ ಸುದ್ದಿ
ಪ್ರಧಾನಿ ಮೋದಿ ಮಾತು ‘ಪ್ರಾಮಿಸ್’ ಟೂತ್ ಪೇಸ್ಟ್ : ಪ್ರಕಾಶ್ ರೈ ಟ್ವೀಟ್
ಬೆಂಗಳೂರಃ ಅರಮನೆ ಮೈದಾನದಲ್ಲಿ ನಿನ್ನೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ದೇಶದ ಪ್ರಧಾನ ಮಂತ್ರಿ ಮಾಡಿರುವ ಭಾಷಣವನ್ನು 2014 ರಲ್ಲಿ ಬಂದ್ ಆಗಿದ್ದ ಪ್ರಾಮಿಸ್ ಟೂತ್ ಪೇಸ್ಟ್ ಗೆ ಹೋಲಿಸಿ ನಟ ಪ್ರಕಾಶ ರೈ ಟ್ವಿಟ್ ಮಾಡುವ ಮೂಲಕ ಪ್ರಧಾನಿ ಭಾಷಣವನ್ನು ಜರಿದಿದ್ದಾರೆ.
ಪ್ರಕಾಶ ರೈ ಟ್ವಿಟ್ ಮಾಡಿರುವ ಪ್ರಾಮಿಸ್ ಟೂತ್ ಪೇಸ್ಟ್ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಬಂದು ಹೋದರೂ, ಸಮಾವೇಶ ಮುಗಿದು 24 ಗಂಟೆ ಕಳೆದರು ಪರಸ್ಪರ ಕೆಸರೆರಚಾಟ ಮಾತ್ರ ನಿಂತಿಲ್ಲ. ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವಂತೆ, ಕಾಂಗ್ರೆಸ್, ಬಿಜೆಪಿ ನಾಯಕರು ಟ್ವೀಟ್ ಅಕೌಂಟ್ ಗಳ ಮೂಲಕ ಒಬ್ಬರನ್ನೊಬ್ಬರು ಕಾಲೆಳೆಯುತ್ತಿರುವುದು ಮುಂದುವರೆದಿದೆ.
ನಟಿ, ಕಾಂಗ್ರೆಸ್ ನಾಯಕಿ ರಮ್ಯ, ನಟ, ಬಿಜೆಪಿಯ ಜಗ್ಗೇಶ, ಮತ್ತು ನಟ ಪ್ರಕಾಶ ರೈ, ಮಾಜಿ ಸಚಿವ ಸಿಟಿ ರವಿ ಅಷ್ಟೇ ಅಲ್ಲದೆ ಸಿಎಂ ಸಿದ್ರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಅವರೂ ಸಹ ಪರಸ್ಪರ ವಾಕ್ಸಮರ ನಡೆಸುತ್ತಿದ್ದಾರೆ.