ಆಶಾ ಕಾರ್ಯಕರ್ತೆಗೆ ಕೊರೊನಾ ದೃಢ – ಜಾಲಗಾರ ಮೊಹಲ್ಲಾ ಸೀಲ್ ಡೌನ್
ಜಾಲಗಾರ ಮೊಹಲ್ಲಾ ಸೀಲ್ ಡೌನ್
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಜಾಲಗಾರ ಮೊಹಲ್ಲಾ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಈ ಬಡಾವಣೆಯ ನಿವಾಸಿ ಆಶಾ ಕಾರ್ಯಕರ್ತೆಗೆ ಕೊರೊನಾ ದೃಢವಾದ ಹಿನ್ನೆಲೆ ಇಡಿ ಜಾಲಗಾರ ಮೊಹಲ್ಲಾ ಒಳಗಡೆ ಪ್ರವೇಶಿಸುವ ದಾರಿಗಳನ್ನು ಬಂದ್ ಮಾಡಲಾಗಿದೆ.
ಬಡಾವಣೆ ಜನರು ಅನಗತ್ಯ ಹೊರಗಡೆ ಬಾರದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಲ್ಲದೆ ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಆಗಾಗ ಕೈತೊಳೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಅನಗತ್ಯ ಬೈಕ್ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಸಾರ್ವಜನಿಕರು ಎಚ್ಚೆತ್ತುಕೊಂಡು ತಮ್ಮ ಜೀವ ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ನಿಯಮಗಳನ್ನು ಪಾಲಿಸಬೇಕು.
ಕೊರೊನಾ ಕುರಿತು ಆತಂಕಬೇಡ ಆದರೆ ಪ್ರತಿಯೊಬ್ಬರು ಸ್ವಚ್ಛತೆ, ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ತಾವು ಬದುಕಬಹುದು ಪರರಿಗೂ ಆರೋಗ್ಯಯುತ ಬದಕಲು ಸಹಕರಿಬಹುದು. ಕಾರಣ ನಾಗರಿಕರು ಇನ್ನಾದರೂ ಎಚ್ಚೆತ್ತುಕೊಂಡು ಹೊರಗಡೆ ಗುಂಪಾಗಿ ಸೇರುವದು ಹರಟೆ ಹೊಡೆಯುವದನ್ನು ಬಿಡಬೇಕು.
ಮನೆ ಸ್ವಚ್ಚವಾಗಿಟ್ಟುಕೊಂಡು ಸಾಮಾಜಿಕ ಅಂತರದೊಂದಿಗೆ ಜೀವನ ರೂಢಿಸಿಕೊಳ್ಳಬೇಕು. ನಿಯಮಗಳನ್ನು ಪಾಲಿಸಿ. ಕೊರೊನಾ ಮುಕ್ತವಾಗುವವರೆಗೂ ಮನೆಯ ಊಟವೇ ಸೇವಿಸಿ. ಮುನ್ನೆಚ್ಚರಿಕೆ ವಹಿಸಿ ಎಂದು ವಿನಯವಾಣಿ ವಿನ್ರಮವಾಗಿ ಕೋರುತ್ತದೆ.