ಗೃಹ ರಕ್ಷಕರ ಸೇವೆ ಸಮಾಜಕ್ಕೆ ಮಾದರಿ-ಎ.ಎಸ್.ಪಿ.ಶಿವಪ್ರಕಾಶ
ಜಿಲ್ಲಾ ಮಟ್ಟದ ಗೃಹ ರಕ್ಷಕ ದಿನಾಚರಣೆ
ಯಾದಗಿರಿ: ಪ್ರತಿಯೊಂದು ಸಂದರ್ಭದಲ್ಲಿಯೂ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತ ಸರ್ಕಾರ ನೀಡುವ ಗೌರವ ಸಂಭಾವನೆಯಲ್ಲಿ ತೃಪ್ತಿಪಟ್ಟು ಸ್ವಾಭಿಮಾನದಿಂದ ಕಾರ್ಯನಿರ್ವಹಿಸುವ ಗೃಹ ರಕ್ಷಕ ದಳದವರ ಕಾರ್ಯ ಶ್ಲಾಘನೀಯ ಎಂದು ಎ.ಎಸ್.ಪಿ ಶಿವಪ್ರಕಾಶ ದೇವರಾಜ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಯಾದಗಿರಿ ಜಿಲ್ಲಾ ಗೃಹ ರಕ್ಷಕದಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗೃಹ ರಕ್ಷಕ ದಳದ ಸಿಬ್ಬಂದಿಗೆ ಹಲವಾರು ಸಮಸ್ಯೆಗಳು ಇದ್ದರೂ ಸರ್ಕಾರದ ರಕ್ಷಣೆಗೆ ಸಂಬಂಧ ಪಟ್ಟಂತೆ ಪ್ರತಿಯೊಂದು ಕೆಲಸಗಳಿಗೂ ಕೈ ಜೋಡಿಸುತ್ತಾರೆ. ಸರ್ವರು ಕಾಳಜಿವಹಿಸಿ ಅವರ ಬೇಡಿಕೆಗಳನ್ನು ಈಡೇರಿಸಿ ಅವರಿಗೆ ಇನ್ನಷ್ಟು ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲಾ ಗೃಹ ರಕ್ಷಕ ದಳದ ಸಮಾಧೇಷ್ಟರಾದ ಪ್ರವೀಣ ದೇಶಮುಖ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಹನುಮಗೌಡ ಪೊಲಿಸ್ ಪಾಟೀಲ್, ಉಪನ್ಯಾಸÀಕ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ, ಜಿಲ್ಲಾ ಗೃಹ ರಕ್ಷಕ ದಳದ ಉಪ ಸಮಾದೇಷ್ಟರಾದ ಮಲ್ಲಪ್ಪ, ಶಹಾಪುರ ಪಿ.ಐ. ನಾಗರಾಜ.ಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ, ರಾಜ್ಯಪಾಲ ಪ್ರಶÀಸ್ತಿ ಸೇರಿದಂತೆ ಅತ್ಯುತ್ತಮ ಪದಕ ಪಡೆದ ಗೃಹರಕ್ಷಕದಳ ಸುರಪುರ ಘಟಕ ಅಧಿಕಾರಿ ಮಲ್ಲಪ್ಪ ಹುಲಕಲ್, ಶಹಾಪುರ ಘಟಕ ಅಧಿಕಾರಿ ಮಾರ್ತಂಡಪ್ಪ ಮುಂಡಾಸ, ರಮೇಶ ಸೇರಿದಂತೆ ಉತ್ತಮ ಪ್ಲಾಟ್ಯೂನ ಕಮಾಂಡರಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಪ್ಪ ಕೊಂಬಿನ ಹಾಗೂ ವೆಂಕಟೇಶ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹುಣಸಿಗಿ ಗೃಹ ರಕ್ಷಕದಳದ ಘಟಕಾಧಿಕಾರಿ ಆಸೀಫ್ ಗುರುಮಿಟ್ಕಲ್, ಗೃಹ ರಕ್ಷಕ ಘಟಕ ಅಧಿಕಾರಿ ಅಂಬಾದಾಸ್, ಶಹಾಪುರ, ಸುರುಪುರ, ಗುರಮಿಟ್ಕಲ್, ಯಾದಗಿರಿ ಮತ್ತು ಶಹಾಪುರ ಘಟಕದ ಗ್ರೃಹ ರಕ್ಷಕರು ಭಾಗವಹಿಸಿದ್ದರು.
ಮಲ್ಲಪ್ಪ ಹುಲಕಲ್ ಪ್ರಾರ್ಥಿಸಿದರು, ಮಾರ್ತಂಡಪ್ಪ ಮುಂಡಾಸ ಸ್ವಾಗತಿಸಿದರು. ಮಾಜಿ ಘಟಕ ಅಧಿಕಾರಿ ಬಾಬು ರಾಜೇಂದ್ರ ನಿರೂಪಿಸಿದರು. ಗೃಹ ರಕ್ಷಕ ಸೇವೆಯಲ್ಲಿ ನಿವೃತ್ತಗೊಂಡ ಘಟಕಾಧಿಕಾರಿಗಳಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.