ಪ್ರಮುಖ ಸುದ್ದಿ
ಜ.26 ರಂದು ಅಪ್ಪನ ಶಖಾಪುರದಲ್ಲಿ ರಥೋತ್ಸವ
ನಾಡಿದ್ದು ವಿಶ್ವರಾಧ್ಯರ ಮಹಾ ರಥೋತ್ಸವ
ಯಾದಗಿರಿ, ಶಹಾಪುರಃ ಪವಾಡ ಪುರುಷ, ಸಿದ್ಧಕುಲ ಸಾಮ್ರಾಟರೆನಿಸಿದ ಸದ್ಗುರು ವಿಶ್ವರಾಧ್ಯರ ಜಾತ್ರೆ ಮತ್ತು ಭವ್ಯ ರಥೋತ್ಸವವನ್ನು ಜ.26ರಂದು ತಾಲೂಕಿನ ಅಪ್ಪನ ಶಖಾಪುರ ಗ್ರಾಮದಲ್ಲಿ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಮಹಾತ್ಮ ಸದ್ಗುರು ವಿಶ್ವರಾಧ್ಯರ ಪಾದುಕೆಗಳ ಆಗಮನ, ಪಲ್ಲಕಿ ಉತ್ಸವ, ಸಂಜೆ 6;30 ಗಂಟೆಗೆ ರಥೋತ್ಸವ ಜರುಗುವದು. ಸುಕ್ಷೇತ್ರ ಅಬ್ಬೆ ತುಮಕೂರಿನ ಸದ್ಗುರು ವಿಶ್ವರಾಧ್ಯರ ಸಂಸ್ಥಾನ ಮಠದ ಪೀಠಾಧಿಪತಿ ಷ,ಬ್ರ,ಡಾ.ಗಂಗಾಧರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ರಥೋತ್ಸವ ನಡೆಯಲಿದೆ.
ರಾತ್ರಿ 9 ಗಂಟೆಗೆ ಧರ್ಮಸಭೆ ನೇರವೆರಲ್ಲಿದ್ದು, ಸಕಲ ಸದ್ಬಕ್ತರು ಆಗಮಿಸಿ ಶ್ರೀ ಗುರು ವಿಶ್ವರಾಧ್ಯರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.
—————————