Homeಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ಈ ವಿದ್ಯಾರ್ಥಿಗಳಿಗೆ ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಸಿಗಲಿದೆ ಸ್ಕಾಲರ್ ಶಿಪ್

(SRFL) ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ ಬಾಳೆಹೊನ್ನೂರು ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ ಬಾಳೆಹೊನ್ನೂರು, ಈ ಸಂಸ್ಥೆಯು ಹಲವು ವರ್ಷಗಳಿಂದ ವಾಹನಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಜೊತೆಗೆ ವಾಹನ ಪರವಾನಗಿ ಮತ್ತು ಚಾಲನಾ ಪರವಾನಾಗಿ
(ಲಘು ವಾಹನ) ಹೊಂದಿದ್ದ ಗ್ರಾಹಕರ ಮಕ್ಕಳಿಗೆ ಮಾತ್ರ ನೀಡುತ್ತಿದ್ದ ಈ ವಿದ್ಯಾರ್ಥಿ ವೇತನವನ್ನು ಗ್ರಾಮೀಣ ಭಾಗದಲ್ಲಿ ಇರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಬೇಕೆಂದು ಇದೀಗ ಎಲ್ಲಾ ಗ್ರಾಮೀಣ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಯಾವುದು?;
- ವಿದ್ಯಾರ್ಥಿಯ ಭಾವಚಿತ್ರ-2
- ವಿದ್ಯಾರ್ಥಿಯ ಆಧಾರ್ ಕಾರ್ಡ್ ಜೆರಾಕ್ಸ್
- ಪೋಷಕರ ಆಧಾರ್ ಕಾರ್ಡ್ (ತಂದೆ ಮತ್ತು ತಾಯಿಯ ಆಧಾರ್ ಜೆರಾಕ್ಸ್)
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- 7, 8, 9, 10 ತರಗತಿಯ ಅಂಕಪಟ್ಟಿ
- ಓದುತ್ತಿರುವ ಹಿಂದಿನ ತರಗತಿಯ ಅಂಕಪಟ್ಟಿ (ಪ್ರಾಂಶುಪಾಲರ ದೃಡೀಕರಣ/ಂಣಣesಣ)
- ವ್ಯಾಸಂಗ ದೃಢೀಕರಣ ಪತ್ರ (study certificate)
- ವಾಹನದ ಮಾಲೀಕರು ಅಥವಾ ಚಾಲಕರು ಪರವಾನಗಿ ಇದ್ದರೆ ಮಾತ್ರ
- ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.
8277319036
9480009793