ಕೊರೊನಾ ಹೊಸ ರೂಪಃ ನಿಯಮಗಳು ಮತ್ತಷ್ಟು ಬಿಗಿ
ರಾಜ್ಯದ ಮಾರುಕಟ್ಟೆಗಳಿಗೆ ಎಚ್ಚರಿಕೆ ಇಲ್ಲವಾದಲ್ಲಿ ಬಂದ್.!
ಕೊರೊನಾ ಹೊಸ ರೂಪ ಅಪಾಯ, ಅಪಾಯ
ಬೆಂಗಳೂರಃ ಕೊರೊನಾ ಹೊಸ ರೂಪಾಂತರ ಸಾಕಷ್ಟು ತೀವ್ರತೆ ಹೊಂದಿದ್ದು, ರಾಜ್ಯಕ್ಕೂ ಕಾಲಿಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ಬ್ರಿಟನ್, ಇಂಗ್ಲೆಂಡ್ ಬಂದ ಪ್ರಯಾಣಿಕರ ಜಾಡು ಹಿಡಿದು ಬೆಳಗಾವಿ, ಬಳ್ಳಾರಿ ಇತರಡೆ ಪ್ರಯಾಣಿಕರನ್ನು ಪತ್ತೆ ಹಚ್ಚಿ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಬ್ರಿಟನ್ ನಿಂದ ಬೆಂಗಳೂರಿಗೆ ಬಂದವರು ಯಾವ ಯಾವ ಜಿಲ್ಲೆಯಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದ್ದು, ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ.
ಹಲವರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಆದರೆ ಅದು ರೂಪಾಂತರ ಕೊರೊನಾವಾ.? ಅಥವಾ ಹಳೇ ಕೊರೊನಾವಾ.? ಎಂಬ ಖಚಿತತೆಗೆ ಅವರ ಸ್ವ್ಯಾಬ್ ಟೆಸ್ಟಿಂಗ್ ಮಾಡಲಾಗಿದ್ದು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ.
ಆ ಹಿನ್ನೆಲೆ ರಾಜ್ಯದ ಮಾರುಕಟ್ಟೆಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು, 6 ಅಡಿ ಅಂತರ, ಮಾಸ್ಕ್, ಸ್ಯಾನಿಟೈಸ್ ಜೊತೆಗೆ ಕೈಗವುಸು ಧರಿಸಬೇಕು. ಪದೇ ಪದೇ ಕೈತೊಳೆಯಬೇಕು. ಕಡ್ಡಾಯವಾಗಿ ಎಲ್ಲಾ ಅಂಗಡಿಗಳ ಮುಂದೆ ಸ್ವಚ್ಛತೆ ಕಡ್ಡಾಯ. ಮಕ್ಕಳು ಮತ್ತು ಹಿರಿಯರು ಮಾರ್ಕೇಟ್ ಗೆ ಬರುವಂತಿಲ್ಲ. ಅಲ್ಲದೆ ದಿನ ಬಿಟ್ಟು ದಿನ ಮಾರುಕಟ್ಟೆ ತೆರೆಯಲು ಚಿಂತನೆ ನಡೆಸಲಾಗುತ್ತಿದೆ.
ನೈಟ್ ಕರ್ಫ್ಯೂ ಜಾರಿ ಕುರಿತು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸುವದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಸಮರ್ಪಕ ಪಾಲನೆ ಕಂಡು ಬಾರದಿದ್ದಲ್ಲಿ ಮಾರುಕಟ್ಟೆ ಬಂದ್ ಮಾಡುವದು ಅನಿವಾರ್ಯ.
ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತೆ ಸೀಲ್ ಡೌನ್, ಲಾಕ್ ಡೌನ್ ಅನಿವಾರ್ಯ ಎಂದು ಸರ್ಕಾರ ಎಚ್ಚರಿಸಿದೆ ಎನ್ನಲಾಗಿದೆ.
ಇಡಿ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿರುವ ಹೊಸ ಕೊರೊನಾ ದಿಂದಾಗಿ ರಾಜ್ಯದಲ್ಲೂ ಯಾವುದೇ ಹೊಸವರ್ಷ ಆಚರಣೆ ಇಲ್ಲ. ಬಾರ್, ರೆಸ್ಟೋರೆಂಟ್ ಗೂ ಎಚ್ಚರಿಕೆ ನೀಡಲಾಗಿದೆ. ರೆಸಾರ್ಟ್ ಗಳು ಬಂದ್ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.