ಅಯೋಧ್ಯ ತೀರ್ಪುಃ ಏಕತಾ ಸಂದೇಶ ನೀಡಿದ ಹಿಂದೂ-ಮುಸ್ಲಿಂ
ನಾವೆಲ್ಲ ಭಾರತೀಯರು ಸುಪ್ರೀಂ ತೀರ್ಪಿಗೆ ಬದ್ಧರು.!
ಯಾದಗಿರಿಃ ಅಯೋಧ್ಯ ತೀರ್ಪು ಹಿನ್ನೆಲೆ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದ ನೂರಾರು ಜನ ಸೇರಿ ಏಕತಾ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಹವಾಜ್ ದೇವು ಹಮ್ ಏಕ್ ಹೈ, ಹಿಂದೂ, ಮುಸ್ಮಿಂ ಸಿಕ್ ಸಾಯಿ ಹಮ್ ಸಬ್ ಭಾಯಿ ಭಾಯಿ ಎಂಬ ಉದ್ಘೋಷಣೆಗಳನ್ನು ಒಕ್ಕೊರಲಿನೊಂದಿಗೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಲಾಲನಸಾಬ ಖುರೇಶಿ ಮತ್ತು ಗುರು ಕಾಮಾ, ನಾವೆಲ್ಲ ಒಂದೇ ಭಾರತಾಂಬೆಯ ಮಕ್ಕಳು. ಇಂದು ಅಯೋಧ್ಯ ತೀರ್ಪು ಏನೇ ಇರಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ತಲೆ ಬಾಗುತ್ತೇವೆ.
ನಾವೆಲ್ಲ ಭಾರತೀಯರು ಏನೆ ಬರಲಿ ನಾವೆಲ್ಲ ಒಗ್ಹಟ್ಟಾಗಿ ದೇಶದ ಪ್ರಗತಿಗೆ ಶ್ರಮಿಸುತ್ತೇವೆ.
ಯಾವುದೇ ಭೇದಭಾವ ಮಾಡದೇ ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ಮಾನವರೆಲ್ಲರೂ ಒಂದೆ ಧರ್ಮಾ ಆಚರಣೆ, ಆಹಾರ ಪದ್ಧತಿ ಹೇಗೆ ಇರಲಿ. ನಾವೆಲ್ಲ ಮಾನವರು ನಮ್ಮ ಕುಲ ಮಾನವ ಎಂಬುದನ್ನು ಅರಿತು ನಡೆಯಬೇಕು.
ಆ ನಿಟ್ಟಿನಲ್ಲಿ ನಗರದಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಒಂದಾಗಿ ಏಕತಾ ಸಂದೇಶ ರವಾನಿಸುವ ಮೂಲಕ ಶಾಂತಿ, ನೆಮ್ಮದಿಯ ಬದುಕಿಗೆ ಮಾನವತಾವಾದಕ್ಕೆ ಜಯವಾಗಲಿ ಎಂದರು.
ಈ ಸಂದರ್ಭದಲ್ಲಿ ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಮಹ್ಮದ್ ಖಾಲಿದ್, ಸಯ್ಯದ್ ಖಾದ್ರಿ, ಮಲ್ಲಿಕಾರ್ಜುನ ಗಂಗಾಧರಮಠ, ರಫೀಕ್ ಚೌದ್ರಿ, ಪಾಶಾ ಪಟೇಲ್, ಮಂಜುನಾಥ ಗಣಾಚಾರಿ, ಶಕೀಲ್ ಮುಲ್ಲಾ, ಯಲ್ಲಯ್ಯನಾಯಕ ವನದುರ್ಗ, ಬಾಬಾ ಟೆಲ್ಲೂರ, ಅಬ್ದುಲ್ ಹಾದಿಮನಿ, ನಯ್ಯುಮ್ ಅಪ್ಘಾನ್, ಅರವಿಂದ ಉಪ್ಪಿನ್ ಸೇರಿದಂತೆ ಇತರರು ಭಾಗವಹಿಸಿದ್ದರು.




