ಬಡವರಿಗೆ ದವಸ ಧಾನ್ಯ ವಿತರಣೆ ಮಾದರಿ ಕಾರ್ಯ
ಕೊರೊನಾದಿಂದ ತತ್ತರಿಸಿದ ಬಡವರಿಗೆ ಕಿಟ್ ವಿತರಣೆ
ಶಹಾಪುರಃ ಕೊರೊನಾ ಮಹಾಮಾರಿಯಿಂದಾಗಿ ಇಡಿ ದೇಶ ತಲ್ಲಣಗೊಂಡಿದೆ. ಕೊರೊನಾ ತಡೆಗೆ ಲಾಕ್ ಡೌನ್ ಜಾರಿ ಅಗತ್ಯವಿದೆ. ಈ ಹಿನ್ನೆಲೆಯಲ್ಲ ಮಾಧ್ಯಮಿಕ ಬಡ ಕುಟುಂಬಗಳು ಸಹ ದುಡಿಯಲು ಕೆಲಸವಿಲ್ಲದೆ ನಿತ್ಯದ ಊಟದ ಚಿಂತೆಯಲ್ಲಿದ್ದು, ದಯವಿಟ್ಟು ಉಳ್ಳವರು ನೆರೆಹೊರೆಯವರು ಅಂತವರ ಸಂಕಟ ಅರಿತು ಕೈಲಾದ ಸಹಾಯ ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಅಂದಾಗ ಕೊರೊನಾ ದೇಶದಿಂದ ಸಮರ್ಥವಾಗಿ ಓಡಿಸಲು ಸಾಧ್ಯವಿದೆ ಎಂದು ಸಿಪಿಐ ಹನುಮರಡ್ಡೆಪ್ಪ ಕರೆ ನೀಡಿದರು.
ಬುಧವಾರ ಇಲ್ಲಿನ ಶ್ರೀಭವಾನಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಶ್ರೀ ಭವಾನಿ ಸಹಕಾರ ಸಂಘದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಕೆಲಸ ಸಮಾಜಕ್ಕೆ ಮಾದರಿಯಾಗಿದೆ. ಇದೇ ರೀತಿ ವಿವಿಧ ಸಮಾಜದವರು ತಮ್ಮ ಸಮಾಜದಲ್ಲಿನ ಬಡವರಿಗೆ ಕೈಲಾದ ಸಹಾಯ ಸಹಕಾರ ನೀಡಬೇಕಿದೆ. ಇದುವರೆಗೂ ನಗರದಲ್ಲಿ ಯುವಕರು, ಇತರರು ಅನ್ನ, ನೀರು ವಿತರಿಸಿದ್ದಾರೆ. ತರಕಾರಿ, ಆಹಾರ ಧಾನ್ಯಗಳ ಕಿಟ್ ಸಹ ವಿತರಿಸಿದ್ದು, ಶಹಾಪುರ ಜನತೆ ಇತರರಿಗೆ ಮಾದರಿ ಎನಿಸಿದ್ದಾರೆ. ಇಂತಹ ವಿಷಮ ಸ್ಥಿತಿ ಸಂದರ್ಭ ಎಲ್ಲರೂ ಕೈಲಾದ ಸಹಾಯ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಆದಷ್ಟು ಬೇಗ ಈ ಮಹಾಮಾರಿಯನ್ನು ಹೊಡೆದೋಡಿಸಿ ಎಂದಿನಂತೆ ಜೀವನ ನಡೆಸಲು ಆ ದೇವರು ಕೃಪೆ ತೋರಲಿ ಎಂದು ಪ್ರಾರ್ಥಿಸೋಣ. ಅಕ್ಕಪಕ್ಕದ ಬಡ ಜನರನ್ನು ಗುರುತಿಸಿ ಎಲ್ಲರೂ ನೆರವು ನೀಡುವ ಮೂಲಕ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಟಿ.ವಿ.ಪÀಂಚಬಾವಿ, ಮಾಜಿ ನಗರ ಪ್ರಾಧಿಕಾರದ ಅಧ್ಯಕ್ಷ ಗುರು ಕಾಮಾ, ನಗರಸಭೆ ಸದಸ್ಯ ಸತೀಶ ಪಂಚಬಾವಿ, ಮುನ್ನಾ ಜೈನ್, ಚನ್ನಬಸವ, ಸುನೀಲ ಕಾಂಬ್ಳೆ, ರಾಜು ಪತಂಗೆ, ಬಾಬು, ಮನೋಹರ ಪತ್ತಾರ, ಸೀತಾರಾಮ, ನಾಗರಾಜ ತಿಪ್ಪನಟಗಿ, ಇನ್ನಿತರರು ಹಾಜರಿದ್ದರು.