ಪ್ರಮುಖ ಸುದ್ದಿವಿನಯ ವಿಶೇಷ
ಶ್ರೀರಾಮನೂರಿನಲ್ಲಿ ಶಹಾಪುರದ ಸೂಗೂರೇಶ್ವರ ಶ್ರೀಗಳು
ಅಯೋಧ್ಯೆಯಲ್ಲಿ ಶಹಾಪುರದ ಸೂಗುರೇಶ್ವರ ಶ್ರೀ
ಅಯೋಧ್ಯೆಯಲ್ಲಿ ಶಹಾಪುರದ ಸೂಗುರೇಶ್ವರ ಶ್ರೀ
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಬಂದಾಗಿನ ವಾತಾವರಣ ನಿರ್ಮಾಣ
ಶಹಾಪುರಃ ಅಯೋಧ್ಯೆಯಲ್ಲಿ ಶಹಾಪುರ ಕುಂಬಾರ ಓಣಿ ಹಿರೇಮಠದ ಪೀಠಾಧಿಪತಿ ಪೂಜ್ಯ ಶ್ರೀ ಸೂಗುರೇಶ್ವರ ಶಿವಾಚಾರ್ಯರು ಇಂದು ರವಿವಾರ ಅಯೋಧ್ಯೆಯ ಪವಿತ್ರ ಭೂಮಿ ಮೇಲೆ ನಡೆದಾಡುತ್ತಿರುವ ಚಿತ್ರಗಳನ್ನು ನೋಡಿಯೇ ಇಲ್ಲಿನ ಅವರ ಭಕ್ತರು ಪುಳುಕಿತಗೊಂಡಿದ್ದಾರೆ.
ಶ್ರೀರಾಮ ಮಂದಿರ ಉದ್ಘಾಟನದ ಆಹ್ವಾನ ಪತ್ರಿಕೆ ಬಂದ ಹಿನ್ನೆಲೆ ಸೂಗುರೇಶ್ವರ ಶ್ರೀಗಳು ಅಯೋಧ್ಯೆಗೆ ತೆರಳಿದ್ದಾರೆ.
ಅಲ್ಲಿನ ರಾಮಪಥ್, ಪವಿತ್ರವಾದ ಸರಯೂ ನದಿ ಸೇರಿದಂತೆ ಶ್ರೀರಾಮನೂರಿನಲ್ಲಿ ಸಂಚರಿಸುತ್ತಿರುವ ಶ್ರೀಗಳು ಇದೊಂದು ಆತ್ಮನುಭವ ಶ್ರೀರಾಮನೂರಿನ ಪವಿತ್ರ ನೆಲದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವದು ನಮ್ಮ ಸೌಭಾಗ್ಯವೆಂದ ಅವರು,
ಇಡಿ ಅಯೋಧ್ಯೆ ಶ್ರಿರಾಮನ ಸ್ಮರಣೆಯಲ್ಲಿದೆ ಎಲ್ಲಿ ನೋಡಿದರೂ ರಾಮಲಲ್ಲಾನ ಪೂಜೆ, ಜಪ, ಸ್ಮರಣೆ ಅಲಂಕಾರವಂತು ಅತ್ಯದ್ಭುತ ನೋಡಲು ಎರಡು ಕಣ್ಣು ಸಾಲದು ಎಂದು ಶ್ರೀಗಳು ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.