ಪ್ರಮುಖ ಸುದ್ದಿ
ನಾರಾಯಣಪುರ ಎಡದಂಡೆ ಕಾಲುವೆಗೆ ಬಿದ್ದು ಶಿಕ್ಷಕ ಸಾವು!
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮ ಸಮೀಪದ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಕುಡಿಯಲು ಹೋದಾಗ ಶಿಕ್ಷಕ ಸಿದ್ಧರಾಮಪ್ಪ ಮಾಳಜಿ(26) ಕಾಲು ಜಾರಿಬಿದ್ದು ನೀರುಪಾಲಾದ ಘಟನೆ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಸಿಬಿಎಸ್ ಇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಸಿದ್ದರಾಮಪ್ಪ ಸ್ನೇಹಿತರೊಂದಿಗೆ ಕಾಲುವೆ ಬಳಿಗೆ ತೆರಳಿದ್ದರು. ನೀರು ಕುಡಿಯಲೆಂದು ಕಾಲುವೆಗೆ ಇಳಿದಾಗ ದುರ್ಘಟನೆ ನಡೆದಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾಲುವೆಗೆ ಹೆಚ್ಚಿನ ನೀರುಬಿಟ್ಟಿದ್ದು ತುಂಬಿ ಹರಿಯುತ್ತಿತ್ತು. ಹೀಗಾಗಿ, ದುರ್ಘಟನೆ ಸಂಭವಿಸಿದೆ. ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿದ್ದು ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.