ಪ್ರಮುಖ ಸುದ್ದಿ
ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಃ ಅರ್ಜಿ ಆಹ್ವಾನ
ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಃ ಅರ್ಜಿ ಆಹ್ವಾನ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರ ಮಾರ್ಗದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಖಾಲಿರುವ ಆಂಗ್ಲ ಮತ್ತು ಉರ್ದು ಭಾಷಾ ಅಥಿತಿ ಶಿಕ್ಷಕರ ಅಗತ್ಯವಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ತಾತ್ಕಾಲಿಕ ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದ್ದು ಆಸಕ್ತ ಅರ್ಹರು ತಮ್ಮ(ಮೂಲ ಪ್ರತಿ) ನಕಲು ದಾಖಲಾತಿಗಳ ಸಮೇತ ಶಹಾಪುರದ ತಾಲೂಕು ಪಂಚಾಯತ್ ಕಚೇರಿ ಎರಡನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತ ಮಾಹಿತಿ ಕೇಂದ್ರಕ್ಕೆ ದಿನಾಂಕ ಜೂನ್ 28 ರೊಳಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕೆಂದು ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಟ್ಟೆಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.8095971486, 9900884139 ಸಂಪರ್ಕಿಸಲು ಕೋರಲಾಗಿದೆ.