ಪ್ರಮುಖ ಸುದ್ದಿ

ಶಹಾಪುರಃ ಐದಾರು ತಿಂಗಳ ಬಾಕಿ ವೇತನಃ ಶಿಕ್ಷಣ ಇಲಾಖೆ ನಿರ್ಲಕ್ಷ ಶಿಕ್ಷಕರ ಆಕ್ರೋಶ

ಬಾಕಿ ವೇತನ ಪಾವತಿಗೆ ಆಗ್ರಹಃ ಪ್ರತಿಭಟನೆ ಎಚ್ಚರಿಕೆ

ಐದಾರು ತಿಂಗಳ ಬಾಕಿ ವೇತನಃ ಶಿಕ್ಷಣ ಇಲಾಖೆ ನಿರ್ಲಕ್ಷ ಶಿಕ್ಷಕರ ಆಕ್ರೋಶ

ಬಾಕಿ ವೇತನ ಪಾವತಿಗೆ ಆಗ್ರಹಃ ಪ್ರತಿಭಟನೆ ಎಚ್ಚರಿಕೆ

yadgiri, ಶಹಾಪುರಃ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ನೇಮಕಗೊಂಡ ತಾಲೂಕಿನ 170 ಜನ ಶಿಕ್ಷಕರ ಐದು ತಿಂಗಳ ಕಾಲ ಸಂಬಳವಿಲ್ಲದೆ ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ಮಕ್ಕಳ ಹಿತದೃಷ್ಟಿಯಿಂದ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಬುಧವಾರ ಮದ್ಯಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಇಲ್ಲಿನ ಬಿಇಓ ಕಚೇರಿಗೆ ತೆರಳಿದ ವೇತನ ವಂಚಿತ ಶಿಕ್ಷಕ ಸಮೂಹ, ಈ ಕೂಡಲೇ ಬಾಕಿ ವೇತನ ಮಂಜೂರು ಮಾಡಬೇಕು ಇಲ್ಲವಾದಲ್ಲಿ ಶುಕ್ರವಾರ ಇಡಿ ಶಿಕ್ಷಕ ಸಮೂಹದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆಕೊಟ್ಟ ಘಟನೆ ಬುಧವಾರ ಜರುಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಯಾಳಗಿ, ಕಳೆದ ಐದಾರು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಪರದಾಡುವಂತಾಗಿದೆ. ಮನೆ ಬಾಡಿಗೆ ಕಟ್ಟದೆ ಬಾಡಿಗೆ ಕೊಟ್ಟ ಮಾಲೀಕರಿಗೆ ಮುಖ ತೋರಿಸಿದಂತಾಗಿದೆ. ಅಲ್ಲದೆ ಕುಟುಂಬ ನಿರ್ವಹಣೆ ಹೊರೆ ತಾಳದೆ ಸಾಲ ಸೂಲ ಮಾಡಿ ಕುಟುಂಬಗಳು ಸಂಕಟದಲ್ಲಿ ಮುಳುಗಿವೆ.

ಕರುಣೆ ಇಲ್ಲದ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಈ ಸಮಸ್ಯೆ ತಲೆದೋರಿದೆ ಎಂದು ಆರೋಪಿಸಿದ ಅವರು, ವೇತನ ಮಂಜೂರಿ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷವೇ ಮುಖ್ಯ ಕಾರಣವಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಶಿಕ್ಷಕರ ಬಾಕಿ ವೇತನ ಮಂಜೂರು ಮಾಡಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಗಧೀಶ ಗೋಟ್ಲಾ (ಜಿಮ್ಮಿ ಸರ್) ಲಕ್ಷ್ಮಣ ಲಾಳಸಗೇರಿ, ಚಂದಪ್ಪ ಸೇರಿದಂತೆ ಇತರೆ ಪದಾಧಿಕಾರಿಗಳು ಸಾಥ್ ನೀಡಿದರು.

ಕೂಡಲೇ ಬಾಕಿ ವೇತನ ಪಾವತಿ ಮಾಡದಿದ್ದರೆ, ಕುಟುಂಬ ಸಮೇತ ಶಿಕ್ಷಕರು ಡಿಡಿಪಿಐ ಕಚೇರಿ ಮುಂದೆ ಧರಣಿ ಅನಿವಾರ್ಯವಾಗಲಿದೆ. ಸಾಕಷ್ಟು ಬಾರಿ ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಕೆಯ ಆಯುಕ್ತರ ಗಮನಕ್ಕೂ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಬುತ್ತಿಕಟ್ಟಿಕೊಂಡು ಡಿಡಿಪಿಐ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳ ಮನ ಕರಗಿರುವದಿಲ್ಲ. ಹೀಗಾಗಿ ಕುಟುಂಬ ಸಮೇತ ಧರಣಿ ಉಪವಾಸಕ್ಕೆ ಎಲ್ಲರೂ ಸಿದ್ಧರಾಗಿದ್ದೇವೆ. ಉಪವಾಸ ವನವಾಸ ಬಿದ್ದು ಸಾಯುವದಕ್ಕಿಂತ ಕಚೇರಿ ಮುಂದೆ ಸಾಯುವುದೇ ಲೇಸೆಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.

-ಬಸವರಾಜ ಯಾಳಗಿ. ಅಧ್ಯಕ್ಷರು-ಪ್ರಾಶಾಶಿ ಸಂಘ ಶಹಾಪುರ.

——————-

Related Articles

Leave a Reply

Your email address will not be published. Required fields are marked *

Back to top button