ಕಾವ್ಯ
ಅರಮನೆ ಅಂಗಳದಲ್ಲಿ ಬಡವರ ಕಿಚ್ಚು
ಅರಮನೆ ಅಂಗಳದಲ್ಲಿ ಬಡತನದ ಕಿಚ್ಚು
*ಜಗಮಗಿಸುವ* ಅರಮನೆಯ ಅಂಗಳದಲ್ಲಿ!
*ಧಗಧಗಿಸುತ್ತಿದೆ* ಬಡತನ ಬೇಗುದಿ..!
ಒಡೆಯನ ಅಂಗಳದಲ್ಲಿ ಹಸಿವಿನ ಕಿಚ್ಚು ನೋಡಗನ ಕಣ್ಣುಕೋರೈಸುತ್ತಿದೆ.! ಮೌನದರಮನೆಯಾಗಿ ಕುಕ್ಕುತ್ತ ಸಾಗಿದೆ ತುತ್ತಿನ ಚೀಲ..!
ಪ್ರವಾಸಿಗರು ಅರಮನೆಯ ಸಿರಿಯು ಕಂಡು ಮನದಿ ಮುದದಿ *ಹಿಗ್ಗಿದೆ.!* ಹೊರಗೆ ಬಡವನ ಹಸಿವಿನ ಒಡಲು *ಕುಗ್ಗಿದೆ.!* ಭಾರದ ಹಸಿವಿನ ಹೆಗಲು ಕಂಡು ನೋಡಗನ ಮನವು ಮಮ್ಮಲ ಮರಗಿ ಮೂಕವಾಗಿದೆ..!
ಕತ್ತಲಲ್ಲಿಯೇ ಪರಕೀಯರ ಉಪಟಳದಿಂದ ಮುಕ್ತಿ ದೊರೆತರು.! ಬಡತನವೆಂಬ ಕಾಳ ಕತ್ತಲ ಕೂಪದಲ್ಲಿ ಹೆಣೆಗುತ್ತಿದೆ ಬದುಕು.! ವೈಭವದ ಅರಮನೆಯ ಮುಂದೆ ಸೂರಿಲ್ಲದೆ ಸೊರಗಿದೆ ಬಡವನ ಬಡಕಲ ಜೀವ.!
ಅರಮನೆಯ ಝೇಂಕಾರದ ನಾದದಲ್ಲಿ ಆರಂಕುಶವಿಲ್ಲದೆ ಬದುಕು ಸವೆಯುತ್ತಿದೆ.! ಒಳಮನದ ಸುಳಿಯಲ್ಲಿ ಬೆಳಕು ಆರಿದರು ಕುಗ್ಗದೆ ಬಾಳ ರಥವು ಸಾಗುತ್ತಿದೆ! ರಾಜನಂಗಳದಲ್ಲಿ* ಬಡತನದ ಬದುಕಿನ ಬೆತ್ತಲೆ ಬಯಲು ಸೆರೆಹಿಡಿದ ನೇತ್ರರಾಜನ ನೇತ್ರಕ್ಕೆ ಶರಣು.!!
–ಚಂದಪ್ಪ ದೋರನಹಳ್ಳಿ
-ಚಿತ್ರ ಕೃಪೆ:-ನೇತ್ರರಾಜ