ಶಹಾಪುರಃ ಓರ್ವ ಕಳ್ಳನ ಬಂಧನ 33 ಸಾವಿರ ರೂ. ಜಪ್ತಿ

ಶಹಾಪುರಃ ಓರ್ವ ಕಳ್ಳನ ಬಂಧನ 33 ಸಾವಿರ ರೂ. ಜಪ್ತಿ
yadgiri,ಶಹಾಪುರಃ ಆಹೋ ರಾತ್ರಿ ಸಮಯದಲ್ಲಿ ನಗರದ ಅಂಗಡಿ ಮುಂಗಟ್ಟುಗಳ ಸರದಿಯಲ್ಲಿ ಕಳ್ಳತ್ತನಕ್ಕೆ ಹೊಂಚು ಹಾಕಿಕೊಂಡು ಕೆಲ ಅಂಗಡಿ ಮತ್ತು ಬೇಕರಿ ಕಳ್ಳತನ ಮಾಡುತ್ತಿದ್ದ ಹೊಸಪೇಟೆ ಮೂಲದ ಆರೋಪಿ ಮಲ್ಲಿಕಾರ್ಜುನ ತಂದೆ ಕೃಷ್ಣಪ್ಪ ಎಂಬ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಈಚೆಗೆ ನಗರದÀ ಬೇಕರಿಯೊಂದು ಕಳ್ಳತನ ಮಾಡಿದ್ದ ಮಲ್ಲಿಕಾರ್ಜುನ ಪರಾರಿಯಾಗಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿಯವರ ಸೂಕ್ತ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಐ ಶ್ರೀನಿವಾಸ್ ಅಲ್ಲಾಪುರೆಯವರ ನೇತೃತ್ವದಲ್ಲಿ ಪಿಎಸ್‍ಐಗಳಾ ಚಂದ್ರಕಾಂತ ಮೆಕಾಲೆ, ಶಾಮಸುಂದರ್ ನಾಯಕ ಮತ್ತು ಕಾನ್ಸಟೇಬಲ್‍ಗಳಾದ ಬಾಬು ನಾಯ್ಕಲ್, ನಾರಾಯಣ, ಭಾಗಣ್ಣ, ಧರ್ಮರಾಜ ಇವರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಪೊಲೀಸರು ಗಸ್ತಿನಲ್ಲಿ ಸಂಚರಿಸುವಾಗ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ ಯುವಕನೋರ್ವನನ್ನು ಠಾಣೆಗೆ ಕರೆ ತಂದು ವಿಚಾರಣೆಗೊಳಸಪಡಿಸಿದಾಗ ಬೇಕರಿ ಕಳುವು ಮಾಡಿರುವದಾಗಿ ತಿಳಿಸಿದ್ದಾನೆ. ಅಲ್ಲದೆ ಆರೋಪಿಯಿಂದ 33,000 ರೂ.ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಐ ಅಲ್ಲಾಪುರೆ ತಿಳಿಸಿದ್ದಾರೆ.