ಶಹಾಪುರಃ ಖದೀಮನ ಕೈಚಳಕ – ಒಂದು ಕೆಜಿ ಬಂಗಾರ, ಎಂಟುವರೆ ಲಕ್ಷ ಕದ್ದು ಪರಾರಿ
ಒಂದು ಕೆಜಿ ಚಿನ್ನ, ಎಂಟುವರೆ ಲಕ್ಷ ಹೊಡೆದು ಖದೀಮ ಪರಾರಿ
ಶಹಾಪುರಃ ಖದೀಮನ ಕೈಚಳಕ – ಒಂದು ಕೆಜಿ ಬಂಗಾರ, ಎಂಟುವರೆ ಲಕ್ಷ ಕದ್ದು ಪರಾರಿ
ಶಹಾಪುರಃ ಒಂದು ಕೆಜಿ ಚಿನ್ನ, ಎಂಟುವರೆ ಲಕ್ಷ ಹೊಡೆದು ಖದೀಮ ಪರಾರಿ
yadgiri, ಶಹಾಪುರಃ ಬಂಗಾರ ವ್ಯಾಪಾರಿಯೊಬ್ಬರು ನಗರದಲ್ಲಿ ವ್ಯವಹಾರ ಮುಗಿಸಿಕೊಂಡು ವಿಜಯಪುರಕ್ಕೆ ತೆರಳಲು ಬಸ್ ಹತ್ತುವಾಗ ಬ್ಯಾಗ್ ನಲ್ಲಿದ್ದ ಒಂದು ಕೆಜಿ ಚಿನ್ನ ಮತ್ತು ಎಂಟುವರೆ ಲಕ್ಷ ರೂ. ದುಡ್ಡು ಹೊಡೆದು ಖದೀಮನೋರ್ವ ಪರಾರಿಯಾದ ಘಟನೆ ನಗರ ಹಳೇ ಬಸ್ ನಿಲ್ದಾಣದಲ್ಲಿ ಸಂಜೆ ಸುಮಾರಿಗೆ ನಡೆದಿದೆ.
ಮುಂಬೈ ಮೂಲದ ವಿಜಯಪುರ ನಿವಾಸಿ ಚಿನ್ನಾಭರಣ ವ್ಯಾಪಾರಿ ವಿಕಾಸ್ ಜೈನ್ ಎಂಬುವರು ಎಂದಿನಂತೆ ಈ ಭಾಗದ ಹಲವಡೆ ಚಿನ್ನ ವ್ಯಾಪಾರಸ್ಥರನ್ನು ಭೇಟಿ ತಮ್ಮ ಚಿನ್ನ ವ್ಯಾಪಾರ ವಹಿವಾಟು ಮುಗಿಸಿ ನಗರ ಬಸ್ ನಿಲ್ದಾಣದಲ್ಲಿ ತಮ್ಮೂರಿಗೆ ವಿಜಯಪುರಕ್ಕೆ ತೆರಳಲು ಬಸ್ ಹತ್ತುವಾಗ ಗದ್ದಲದ ನಡುವೆ ಖದೀಮನೋರ್ವ ಬ್ಯಾಗ್ ನಲ್ಲಿನ ಚಿನ್ನ ಹಾಗೂ ದುಡ್ಡು ಹಾರಿಸಿದ ಘಟನೆ ನಡೆದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸುಮಾರು 70 ಲಕ್ಷ ರೂ. ವೆಚ್ಚದ ಚಿನ್ನ,ನಗದು ಎಂಟುವರೆ ಲಕ್ಷ ರೂ. ಕದ್ದಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರ ಕಳ್ಳನ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.