ಪ್ರಮುಖ ಸುದ್ದಿ
ಮೂವರಿಗೆ ಉಪ ಮುಖ್ಯಮಂತ್ರಿ ಪಟ್ಟ : ಸವದಿಗೆ ಸಮೃದ್ಧಿ
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಅದರ ಜತೆಗೆ ಮೂವರು ಉಪಮುಖ್ಯಮಂತ್ರಿಗಳನ್ನು ಘೋಷಿಸಿದ್ದಾರೆ. ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿಗಳನ್ನಾಗಿ ಘೋಷಿಸಿದ್ದಾರೆ. ಅಂತೆಯೇ ಗೋವಿಂದ ಕಾರಜೋಳ್ ಗೆ ಲೋಕೋಪಯೋಗಿ ಖಾತೆ, ಅಶ್ವಥ್ ನಾರಾಯಣಗೆ ಉನ್ನತ ಶಿಕ್ಷಣ ಮತ್ತ ಐಟಿ ಬಿಟಿ ಖಾತೆ , ಲಕ್ಷ್ಮಣ ಸವದಿಗೆ ಸಾರಿಗೆ ಖಾತೆ ನೀಡಲಾಗಿದೆ.
ಆದರೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡಿಸಿಎಂಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಹಾಗೂ ಡಿಸಿಎಂ ಕನಸು ಕಾಣುತ್ತಿದ್ದ ಬಿ.ಶ್ರೀರಾಮುಲು ಕೇವಲ ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.