ಪ್ರಮುಖ ಸುದ್ದಿ
ತಿರುಪತಿಯಲ್ಲಿ ಭಾರಿ ಮಳೆಃ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಪ್ರವಾಹ

ತಿರುಪತಿಯಲ್ಲಿ ಭಾರಿ ಮಳೆಃ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಪ್ರವಾಹ
ವಿವಿ ಡೆಸ್ಕ್ಃ ತಿರುಮಲ ತಿರುಪತಿಯಲ್ಲಿ ಗುರುವಾರ ಭಾರಿ ಮಳೆ ಸುರಿದ ಪರಿಣಾಮ ಕಾಲ್ನಡಿಗೆಯಿಂದ ಸಾಗುವ ಭಕ್ತರು ಪ್ರವಾಹಕ್ಕೆ ಸಿಲುಕಿದ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ತುಣುಕುಗಳು ನೋಡಿದರೆ ಅಪಾಯಕರ ಸ್ಥಿತಿ ನಿರ್ಮಾಣವಾಗಿರುವದು ಕಂಡು ಬರುತ್ತಿದೆ.
ಯಾವುದೇ ಮಾರ್ಗದಿಂದ ತಿರುಮಲಕ್ಕೆ ಹೋಗುವುದು ಅಪಾಯಕಾರಿಯಾಗಿದೆ. ಬೆಟ್ಟದಿಂದ ಎಲ್ಲಡೆ ನೀರು ಹರಿದು ಬರುತ್ತಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ. ರಸ್ತೆಯುದ್ದಕ್ಕೂ ಕಾರು, ಇತರೆ ವಾಹನಗಳು ಹರಿದು ಹೋಗುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಆತಂಕ ತರಿಸುವಂತಿವೆ.
ವ್ಯಕ್ತಿಯೊಬ್ಬ ರಸ್ತೆ ಬದಿ ಹರಿಯುವ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುವದು ಕಾಣುತ್ತಿದೆ. ಹೀಗಾಗಿ ಇಡಿ ತಿರುಪತಿ ಮಳೆಯಿಂದಾಗಿ ನಲುಗಿ ಹೋಗಿದ ಚಿತ್ರಣ ನಾಗರಿಕರ ಮುಂದಿದೆ. ತಿರುಪತಿ ವೆಂಕಟರಮಣ ನಂಬಿದ ಭಕ್ತರನ್ನ ಕಾಪಾಡಲಿ ಎಂದು ವಿವಿ ಬಳಗ ಪ್ರಾರ್ಥಿಸುತ್ತದೆ.