ಪ್ರಮುಖ ಸುದ್ದಿ
ಶಹಾಪುರಃ ನಗರ ಪ್ರಾಧಿಕಾರ ಅಧ್ಯಕ್ಷರಾಗಿ ಚಿಲ್ಲಾಳ ನೇಮಕ
ಶಹಾಪುರಃ ನಗರ ಪ್ರಾಧಿಕಾರ ಅಧ್ಯಕ್ಷರಾಗಿ ಚಿಲ್ಲಾಳ ನೇಮಕ
ಯಾದಗಿರಿ,ಶಹಾಪುರಃ ಇಲ್ಲಿನ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹಿರಿಯ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ ಅವರು ಸೇರಿದಂತೆ ಇತರೆ ಮೂವರನ್ನು ಸದಸ್ಯರನ್ನಾಗಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಸಿದ್ದಯ್ಯ ಹಿರೇಮಠ, ಮುರಳೀಧರ ಕುಲಕರ್ಣಿ ಮತ್ತು ಗಿರೀಜಾ ಬಸಪ್ಪ ತಳವಾರ ಅವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿದೆ. ಮುಂದಿನ ಮೂರು ವರ್ಷದವರೆಗೂ ಅಥವಾ ಸರ್ಕಾರ ಮುಂದಿನ ಆದೇಶದವರೆಗೂ ಇವರು ಪ್ರಾಧಿಕಾರದ ಅಧಿಕಾರೇತರ ಅಧ್ಯಕ್ಷ ಮತ್ತು ಸದಸ್ಯರಾಗಿ ಮುಂದುವರೆಯಲಿದ್ದಾರೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ನೂತನ ಅಧ್ಯಕ್ಷ ಮತ್ತು ಸದಸ್ಯರು ಮಾಜಿ ಶಾಸಕ ಗುರು ಪಾಟೀಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.