ಅಂಕಣಸಂಸ್ಕೃತಿ

ತುಳಸಿ ಪೂಜಾ ಹಿಂದಿನ ಪುರಾಣವೇನು.? ಗೊತ್ತೆ.?

ಜಲಂದರ ರಾಕ್ಷಸನನ್ನ ವಧಿಸಲು ಬಂದ ಶಿವ..!

ಜಲಂದರನೆಂಬ ರಾಕ್ಷಸ ಅಂತ್ಯವಾದದು ಹೇಗೆ.?

ಜಲಂದರ ಓರ್ವ ರಾಕ್ಷಸ, ತನ್ನ ಪತ್ನಿ ವೃಂದಾಳ ಅಪಾರ ತಪಸ್ಸು ವಿಷ್ಣು ಭಕ್ತೆ, ಆಕೆಯ ಮೂಲಕ ಜಲಂದರ ವರ ಪಡೆದಿರುತ್ತಾನೆ.
ಮುಂದೆ ಆತನ ಉಪಟಳ ಜಾಸ್ತಿ ಆಗುತ್ತದೆ. ಆತನ ಪತ್ನಿ ಪತಿಧರ್ಮ ಪತಿವ್ರತ ಪಾಲನೆಯಿಂದ ಪತಿ ಜಲಂದರನಿಗೆ ಅತಿ ಶಕ್ತಿ ದೊರೆತಿರುತ್ತದೆ.

ಜಲಂದರನ‌ ಪತ್ನಿ‌ ವೃಂದಾ ಎಂದು ಪಾತಿವ್ರತ‌ ಕಳೆದುಕೊಳ್ಳುತ್ತಾಳೆ ಅಂದೆ ಜಲಂದರನ ಮರಣ‌ವಾಗಲಿದೆ‌ ಎಂದು‌ ಆತ ಪಡೆದ ವರ‌.

ಮುಂದೆ ಜಲಂದರನ ಉಪಟಳ ಜಾಸ್ತಿಯಾಗುತ್ತದೆ. ಆ ರಾಕ್ಷಸನ‌ ಉಪಟಳ ದೇವಾನು ದೇತೆಗಳಿಗೂ ತಟ್ಟುತ್ತದೆ. ಹೀಗಾಗಿ ರಾಕ್ಷಸ ಜಲಂದರನ ಉಪಟಳ ತಡೆಯಲು ಏನೇ ಮಾಡಿದರೂ ದೇವಾನು‌ದೇತೆಯರು ವಿಫಲರಾಗುತ್ತಾರೆ.

ಆಗ ಎಲ್ಲಾ ದೇವಾನು ದೇವತೆಯರು ಶಿವನ ಮೊರೆ ಹೋಗುತ್ತಾರೆ. ಜಲಂದರ ಎಂಬ ರಾಕ್ಷಸನಿಗೆ ನೀವು ನೀಡದ‌ ವರದಿಂದ ನಮ್ಮೆಲ್ಲರಿಗೂ ಕಾಟ ಕೊಡುತ್ತಿದ್ದಾನೆ ಆತನ ಸಂಹಾರ ಹೇಗೆ ಸಾಧ್ಯ.‌ ಆತನ ಪಾಪ ಅಹಂಕಾರ ಹೆಚ್ಚಾಗುತ್ತಿದೆ ಏನು ಮಾಡುವದೆಂದು ಕೇಳುತ್ತಾರೆ.

ಆಗ ದೇವಾನು ದೇವತೆಗಳಿಗೂ ಚಿಂತಿಸದಿರಿ ಆತನ ಪತ್ನಿ ವೃಂದಾ ಪತಿವ್ರತೆಯಾಗಿದ್ದು,‌ ಆಕೆಯ ಪರಮ‌ ಪಾವಿತ್ರ್ಯದಲ್ಲಿ ಆತನ ಜೀವ ಅಡಗಿದೆ. ಆಕೆಯ ಪತಿವ್ರತೆ ಸಂಸ್ಕಾರ ಪಾಲನೆಯಿಂದ ಆತನಿಗೆ ಅಗಾಧ ಶಕ್ತಿ ದೊರೆತಿದೆ.

ಅದಕ್ಕೆಲ್ಲ ಉಪಾಯವಿದೆ ಎಂದು ತಿಳಿಸುತ್ತಾನೆ. ಆಗ ಶಿವ ಭಗವಾನ್ ವಿಷ್ಣುವಿಗೆ ಈ ವಿಷಯ ತಿಳಿಸುತ್ತಾನೆ. ನಿನ್ನ ಭಕ್ತೆ ವೃಂದಾಳನ್ನು ನೀನು ಜಲಂದರನ ವೇಷಧಾರಿಯಾಗಿ ಆಕೆಯ ವ್ರತಕ್ಕೆ ಭಂಗ ತರಬೇಕಿದೆ. ಆಗ ಜಲಂದರನ ವಧಿಸಲು ಸಾಧ್ಯ ಎಂದು ಹೇಳುತ್ತಾನೆ.

ವಿಷ್ಣು ಆಗ ಜಲಂದರನ ವೇಷದಲ್ಲಿ ವೃಂದಾಳ ಎದುರು ಪ್ರತ್ಯಕ್ಷನಾಗುತ್ತಾನೆ. ವಿಷ್ಣುವಿನ ಭಕ್ತಳು ಆದ‌ ವೃಂದಾ ಜಲಂದರನ ವೇಷದಲ್ಲಿ ಬಂದ‌ ವಿಷ್ಣುವನ್ನು ತನ್ನ ಪತಿ ಜಲಂದರ ಎಂದು ಕೊಂಡು‌ ತಬ್ಬಿಕೊಳ್ಳುತ್ತಾಳೆ.

ಅತ್ತ ಜಲಂದರನ ಜೊತೆ ದೇವತೆಯರ ಘೋರ ಯುದ್ಧವು ನಡೆದಿರುತ್ತದೆ. ಆಗ ಶಿವ ಜಲಂದರನನ್ನು ವಧಿಸುತ್ತಾನೆ.

ವೃಂದಾ ವಿಷ್ಣುವನ್ನು ತಬ್ಬಿಕೊಳ್ಳುವ ಮೂಲಕ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ.‌ ಪತಿ ‌‌ಜಲಂದನ ಶಕ್ತಿ ಅಡಗಿ ಹೋಗುತ್ತದೆ. ಆಗ ಜಲಂದರ ಯುದ್ಧದಲ್ಲಿ‌ ಮಡಿಯುತ್ತಾನೆ.

ವೃಂದಾ ತನ್ನ ಪಾವಿತ್ರ್ಯತೆ ಹಾಳಾಯಿತು‌ ಎಂದು‌ ತನ್ನ ಪತಿಯ ಜೀವಕ್ಕು ಕುತ್ತು ಬಂದಿತೆಂದು ಅಳುತ್ತಾ ಅಗ್ನಿಪ್ರವೇಶ ಮಾಡುತ್ತಾಳೆ.

ಆಗ ವಿಷ್ಣು ವೃಂದಾಳ ಭಕ್ತಿಗೆ ಮೆಚ್ಚಿ, ಮುಂದೆ ತುಳಸಿ ಸಸಿಯಾಗಿ ಜೀವ ಪಡೆದು ಸದಾ ತನ್ನ ಮನೆ ಮುಂದೆಯೇ ಇರುವ ‌ಸ್ಥಾನವನ್ನು ಕರುಣಿಸುತ್ತಾನೆ.

ತುಳಸಿಯಾಗಿ ಜೀವ ಪಡೆದ ವೃಂದಾಳನ್ನು ತುಳಸಿ ಪೂಜೆ ತುಳಸಿ ಮದುವೆಯಾಗುತ್ತೇನೇ ಎಂದು‌ ವಿಷ್ಣು  ವಾಗ್ವಾದ ನೀಡುತ್ತಾನೆ. ಹಲವಡೆ ಈ ಕಥೆ ಬೇರೆ ಬೇರೆ ರೂಪದಲ್ಲಿಯೂ ಕಾಣಬಹುದಾಗಿದೆ.

ಈ ಪ್ರಸಂಗವೇ ಅಂದಿನಿಂದ ತುಳಸಿ ಪೂಜಾ, ತುಳಸಿ ಮದುವೆ ಮಾಡುತ್ತಾ‌ ಬಂದಿರುವದು ಎಂಬುದು ಪುರಾಣದಲ್ಲಿ ಉಲ್ಲೇಖವಿದೆ. ಇಂದು ಆ ಶುಭ ದಿನ‌ ತುಳಸಿ ಪೂಜಾ ದಿನ. ಎಲ್ಲರಿಗೂ ಶುಭವಾಗಲಿ.

ಗಿರಿಧರ ಶರ್ಮಾ. ಜ್ಯೋತಿಷಿ, ಶ್ರೀರಂಗಪಟ್ಟಣ.

ಮೊ.9945098262.

Related Articles

Leave a Reply

Your email address will not be published. Required fields are marked *

Back to top button