ಕಾವ್ಯ
ದೇವಾಪುರದ ಬಸವರಾಜ ಕಾಸೆ ಬರೆದ ಎರಡು ಕವಿತೆ
ಜವಾಬು
ನೀಲಿ ಕಡಲ ಒನಪಿನ ಕಿನ್ನರಿ
ನಿನ್ನ ಬಳುಕು ಬಲು ಸೊಗಸು
ಸುಳಿ ಸುಳಿದು ಕಿನಾರೆಯೆಡೆಗೇ
ಮೋಹಿಸಿ ಬಂದು ಮರಳುವೆ ಯಾಕೆ
ಹುಣ್ಣಿಮೆಯ ದಿನ ಹುಚ್ಚೆದ್ದು ಕುಣಿಯುವ
ಆಸೆಗಳಿಗೆ ಜವಾಬು ನೀಡಬೇಕು ನೀನೀಗ
ಕಡಲಿನ ಸುತ್ತ
ಹೇ ಕಡಲು ನೀನು ವ್ಯಾಪಿಸಿದಷ್ಟೇ ವಿಸ್ತಾರ
ಭಾವಗಳು ತುಂಬಿರುವ ಈ ಮನ
ಅದಕ್ಕೆ ನಾ ಕಿನಾರೆಯಾಗಿ
ಆವರಿಸಿರುವೆ ನಿನ್ನ ಸುತ್ತ
ಹೆಣ್ಣಿನ ಅಂತರಂಗ ಅರಿಯಲು
ಶೋಧಿಸುತ್ತಿರುವೆ ನಿನ್ನ ಆಳ
– ಬಸವರಾಜ ಕಾಸೆ
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
9741910619