ಭಾರಿ ಮಳೆಃ ಸಂಕಷ್ಟದಲ್ಲಿ ಯಕ್ಷಗಾನ ಸೀರೆ ನೇಯ್ಗೆ ಮಾಡುವ ವೃದ್ಧ ದಂಪತಿ
ಭಾರಿ ಮಳೆಃ ಯಕ್ಷಗಾನ ಸೀರೆ ನೇಯ್ಗೆ ಮಾಡುವ ಕುಟುಂಬ ಬೀದಿಗೆ
ಉಡುಪಿಃ ಜಿಲ್ಲೆಯಲ್ಲಿ ಭಾರಿ ಮಳೆಯಾದ ಪರಿಣಾಮ ನಗರದಲ್ಲಿ ಎಲ್ಲಡೆ ಬಡಾವಣೆ, ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿಯುತ್ತಿದ್ದು, ಹಲವಾರು ಮನೆಗಳು ಜಲಾವೃತವಾಗಿವೆ.
ಯಕ್ಷಗಾನಕ್ಕೆ ಬೇಕಾಗುವ ವಿಷೇಶ ಸೀರೆಗಳನ್ನು ನೇಯ್ಗೆ ಮಾಡುವ ಬೆರಳಣಿಕೆ ನೇಕಾರರಲ್ಲಿ ಒಂದಾದ ಇಲ್ಲಿನ ಲಕ್ಷ್ಮಣ ಶೆಟ್ಟಿಗಾರ ವೃದ್ಧ ದಂಪತಿ ಪ್ರವಾಹಕ್ಕೆ ಒಳಗಾಗಿ ಮನೆಯೊಳಗೆ ನೀರು ನುಗ್ಗಿದ್ದು, ಸಂಕಷ್ಟಕ್ಕೆ ಸಿಲುಕಿದೆ.
ಯಕ್ಷಗಾನ ಸೀರೆಯೊಂದಕ್ಕೆ 400 ರೂ.ಪಡೆಯುವ ಈ ವೃದ್ಧ ದಂಪತಿ ಪ್ರಸ್ತುತ ಮನೆಯಲ್ಲಾ ನೀರು ನುಗ್ಗಿ ನೇಯ್ಗೆ ಮಾಡುವ ಯಂತ್ರ ಸೇರಿದಂತೆ ನೇಯ್ಗೆಗೆ ಬೇಕಾದ ದಾರದುಂಡೆಗಳು ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುವೆ.
ಸದ್ಯ ಈ ವೃದ್ಧ ದಂಪತಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದ್ದು, ಮುಂದಿನ ಜೀವನ ಸುಧಾರಿಸಿಕೊಳ್ಳಲು ಕಷ್ಟಕರ ಎನ್ನಲಾಗಿದೆ. ಈ ಕುರಿತು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಹಕರಿಸುವಂತೆ ಈ ವೃದ್ಧ ದಂಪತಿ ಪರವಾಗಿ ಅನೇಕರು ಕರೆ ನೀಡಿದ್ದಾರೆ.
ಲಕ್ಷ್ಮಣ ಶೆಟ್ಟಿಗಾರ ಅವರಿಗೆ ಈಗ ವಯಸ್ಸು 72 ಪತ್ನಿ ಜೊತೆ ಸೀರೆ ನೇಯ್ಗೆ ಮಾಡಿ ಬದುಕು ಕಟ್ಟಿ ಕೊಂಡಿದ್ದರು. ಜಿಲ್ಲಾಧಿಕಾರಿಗಳು ಈ ವೃದ್ಧ ದಂಪತಿ ಸದ್ಯ ಯಾರ ಸಂಬಂಧಿಕರ ಮನೆಯಲ್ಲಿದ್ದಾರೆ ಪತ್ತೆಮಾಡಿ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಲಿ ಎಂಬುದು ವಿನಯವಾಣಿ ಆಶಯ.