ಇಂದು ಉಕ್ಕಿನಾಳ ಗ್ರಾಮಕ್ಕೆ ಗವಿ ಸಿದ್ಧೇಶ್ವರ ಶ್ರೀ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಿದ್ಧತೆ
ಉಕ್ಕಿನಾಳದಲ್ಲಿ ಬೃಹತ್ ಆರೋಗ್ಯ ಶಿಬಿರಕ್ಕೆ ಸಕಲ ವ್ಯವಸ್ಥೆ

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಿದ್ಧತೆ
ಉಕ್ಕಿನಾಳದಲ್ಲಿ ಬೃಹತ್ ಆರೋಗ್ಯ ಶಿಬಿರಕ್ಕೆ ಸಕಲ ವ್ಯವಸ್ಥೆ
ಇಂದು ಉಕ್ಕಿನಾಳ ಗ್ರಾಮಕ್ಕೆ ಗವಿ ಸಿದ್ಧೇಶ್ವರ ಶ್ರೀ
yadgiri, ಶಹಾಪುರಃ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಬಸನಗೌಡ ಮಾಲಿ ಪಾಟೀಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಚ್‍ಸಿಜಿ ಆಸ್ಪತ್ರೆ ಬೆಂಗಳೂರ ಮತ್ತು ಕಲ್ಬುರ್ಗಿಯ ಅನುಗೃಹ ಕಣ್ಣಿ ಆಸ್ಪತ್ರೆ ಸಂಯೋಜನೆಯೊಂದಿಗೆ ಇಂದು ಶನಿವಾರ ನಡೆಯಲಿರುವ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಡಾ.ಮಲ್ಲನಗೌಡ ಪಾಟೀಲ್ ಉಕ್ಕಿನಾಳ ತಿಳಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನೀರಿಕ್ಷೆ ಹೊಂದಲಾಗಿದ್ದು, ಯಾವುದೇ ತೊಂದರೆಯಾಗದಂತೆ ಪೂರ್ವಯೋಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಮತ್ತು ಸೊನ್ನದ ಡಾ.ಶಿವಾನಂದ ಮಹಾ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ಭಕ್ತಾಧಿಗಳು ಉಬಯ ಶ್ರೀಗಳ ಸಂದೇಶ ಆಲಿಸುವ ತವಕದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ತೊಂದರೆ ಆಗದಂತೆ ಜನರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆಯು ಮಾಡಲಾಗಿದೆ.
ಕ್ಯಾನ್ಸರ್ ಸೇರಿದಂತೆ ಇತರೆ ರೋಗಳ ತಪಾಸಣೆ ನಡೆಸಲು ತಜ್ಞ ವಯದ್ಯರ ತಂಡವೇ ಬಂದಿಳಿದಿದ್ದು, ವಿವಿಧ ರೋಗಗಳ ತಪಾಸಣೆಗೆ ಬೇಕಾದ ಪ್ರತ್ಯೇಕ ವ್ಯವಸ್ಥೆಗಳು ಸಹ ಮಾಡಲಾಗಿದೆ. ಜನರು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಆಗ ಕಾರ್ಯಕ್ರಮ ಸಾರ್ಥಕತೆ ಪಡೆದುಕೊಂಡಂತೆ. ಈಗಾಗಲೇ ಸುತ್ತಲಿನ 30 ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ನುರಿತ ವೈದ್ಯಕೀಯ ತಂಡ ಹಲವು ಮಾಹಿತಿ ಸಂಗ್ರಹಿಸಿದ್ದು, ಸುಮಾರು 4 ಸಾವಿರ ಕುಟುಂಬದ ಆರೋಗ್ಯ ಸ್ಥಿತಿಗತಿಯನ್ನು ಸಂಗ್ರಹಿಸಲಾಗಿದೆ. ಈ ಕುರಿತು ಕಾರ್ಯಕ್ರಮದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.