UPSCಯಲ್ಲಿ 3ನೇ ರ್ಯಾಂಕ್ ಪಡೆದ ಉಮಾ ಹರಥಿ ಸಕ್ಸಸ್ ಸ್ಟೋರಿ
ಚೆನ್ನೈ: ದೇಶದ ಕಠಿಣ ಪರೀಕ್ಷೆಯಲ್ಲಿ ಯಪಿಎಸ್‌ಸಿ ಪರೀಕ್ಷೆ ಕೂಡಾ ಒಂದು. ಈ ಪರೀಕ್ಷೆ ಪಾಸ್ ಮಾಡುವುದು ಎಂದರೆ ತಪಸ್ಸಿಗೆ ಸಿಕ್ಕ ಪ್ರತಿಫಲವೆಂದೇ ಹೇಳಬಹುದು. 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಬರೆದು 3ನೇ ರ್ಯಾಂಕ್ ಪಡೆದ ಉಮಾ ಹರಥಿ ಎನ್ ರವರ ಕುರಿತ ಸ್ಟೋರಿ.
ಉಮಾ ಹರಥಿ ಎನ್ ಮೂಲತಃ ತೆಲಂಗಾಣದ ನಲ್ಗೊಂಡ ಜಿಲ್ಲೆಯವರು. ತಂದೆ ಸೂಪರಿಂಟೆಂಡಂಟ್ ಆಫ್ ಪೊಲೀಸ್. ತಾಯಿ ಗೃಹಿಣಿ. ಹೈದೆರಾಬಾದ್‌ನಲ್ಲಿಯೇ ತಮ್ಮ ಪ್ರಾಥಮಿಕ, ಕಾಲೇಜು ಶಿಕ್ಷಣವನ್ನು ಪಡೆದ ಇವರು ಐಐಟಿ ಹೈದಾರಾಬಾದ್‌ನಲ್ಲಿ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪಡೆದರು.
ಉಮಾ ಹರಥಿ ಅವರು ಯುಪಿಎಸ್‌ಸಿ ಪರೀಕ್ಷೆಗೆ ಮುನ್ನ ಕೋಚಿಂಗ್ ಸಂಸ್ಥೆಯಲ್ಲಿ ಕೆಲಸವನ್ನು ಆರಂಭಿಸಿದ್ದರು. ಉಮಾ ತಮ್ಮ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯನ್ನು ತಮ್ಮ 5ನೇ ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ.
ಯುಪಿಎಸ್‌ಸಿ ಪರೀಕ್ಷೆಗೆ ಓದುವವರಿಗೆ ಅತಿಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಲಕ್ಷಾಂತರ ಆಕಾಂಕ್ಷಿಗಳು ಈ ಪರೀಕ್ಷೆಯನ್ನು ಪ್ರತಿವರ್ಷ ಬರೆಯುತ್ತಾರೆ. ಒಂದು ಬಾರಿ ಉತ್ತೀರ್ಣರಾಗದವರು ಮತ್ತೆ ಮತ್ತೆ ಪ್ರಯತ್ನವನ್ನು ಮುಂದುವರೆಸುತ್ತಾರೆ. ಅವರ ಜ್ಞಾನವು, ಅನುಭವವು, ಪರೀಕ್ಷೆಯನ್ನು ಎದುರಿಸುವ ಎಲ್ಲ ತಂತ್ರಗಳು ಅಷ್ಟೇ ಶಾರ್ಪ್ ಆಗುತ್ತವೆ. ಆದ್ದರಿಂದ ಈ ಪರೀಕ್ಷೆಯನ್ನು ಗೆಲ್ಲಲು ತಾನು ಅರ್ಹತೆ ಇರುವವರೆಗೆ ಛಲ ಬಿಡದೇ ಓದಿ ಯಶಸ್ಸು ಪಡೆಯುತ್ತೇನೆ ಎಂದೇ ನಿರ್ಧಾರ ಮಾಡಿ ಓದಲು ನಿರ್ಧರಿಸಬೇಕು.