Homeಪ್ರಮುಖ ಸುದ್ದಿ
ಉತ್ತರಾಖಂಡದಲ್ಲಿ ಸಾವನ್ನಪ್ಪಿದ ನಾಲ್ವರು ಕನ್ನಡಿಗರ ಮೃತದೇಹ ಪತ್ತೆ
ಬೆಂಗಳೂರು : ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ ಐವರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಇದೀಗ ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿದ್ದ ವೇಳೆ ಹವಮಾನ ವೈಪರೀತ್ಯದಿಂದಾಗಿ ಸಾವನ್ನಪ್ಪಿದ ಐವರು ಕನ್ನಡಿಗರ ಪೈಕಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಉತ್ತರ ಕಾಶಿಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಬೆಂಗಳೂರಿಗೆ ಮೃತದೇಹಗಳನ್ನು ರವಾನಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.