ಪ್ರಮುಖ ಸುದ್ದಿ
ಪ್ರವಾಹ : ಭೀಮಾತೀರದ ವೇದೇಶತೀರ್ಥ ವಿದ್ಯಾಪೀಠ ಜಲಾವೃತ!
(ಸಾಂದರ್ಭಿಕ ಚಿತ್ರ)
ಕಲಬುರಗಿ : ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಅಲ್ಲಿನ ಜಲಾಶಯಗಳು ಭರ್ತಿ ಆಗಿದ್ದು ಭೀಮಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಕಲಬುರಗಿಯಲ್ಲೂ ಭೀಮಾ ನದಿತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ದೇಗುಲಕ್ಕೆ ತೆರಳುವ ಸೇತುವೆ ಈಗಾಗಲೇ ಮುಳುಗಡೆ ಆಗಿದ್ದು ದೇಗುಲಕ್ಕೂ ನೀರು ಹರಿದಿದೆ. ಇಂದು ಮಣ್ಣೂರು ಗ್ರಾಮದ ವೇದೇಶತೀರ್ಥ ವಿದ್ಯಾಪೀಠಕ್ಕೂ ಭೀಮಾನದಿ ನೀರು ನುಗ್ಗಿದೆ. ಪರಿಣಾಮ ವಿದ್ಯಾಪೀಠ ಸಂಪೂರ್ಣ ಜಲಾವೃತಗೊಂಡಿದೆ. ಮಣ್ಣೂರು ಗ್ರಾಮವೂ ಸಂಪೂರ್ಣ ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಭೀಮಾ ನದಿ ತೀರದಲ್ಲಿ ಭಾರೀ ಪ್ರವಾಹದ ಭೀತಿ ಸೃಷ್ಠಿ ಆಗಿದ್ದು ಗ್ರಾಮೀಣ ಜನ ಆತಂಕಕ್ಕೆ ಒಳಗಾಗಿದ್ದಾರೆ.