ವೀಳ್ಯದೆಲೆ ಬಗ್ಗೆ ನಿಮಗೆಷ್ಟು ಗೊತ್ತು.? ಈ ಎಲೆಯಲ್ಲಿರುವ ಔಷಧಿಯ ಗುಣಲಕ್ಷಣಗಳಾವು.?
ವೀಳ್ಯದೆಲೆ ಸೇವನೆಯಿಂದ ಆರೋಗ್ಯ ಸುಧಾರಣೆ
ವೀಳ್ಯದೆಲೆ ಬಗ್ಗೆ ನಿಮಗೆಷ್ಟು ಗೊತ್ತು.? ಯಾವ್ಯಾವ ಸಮಸ್ಯೆಗೆ ಮದ್ದು..? ಓದಿ
ವೀಳ್ಯದೆಲೆ ಸೇವನೆಯಿಂದ ಆರೋಗ್ಯ ಸುಧಾರಣೆ
ವಿವಿ ಡೆಸ್ಕ್ ವೀಳ್ಯದೆಲೆ ಧಾರ್ಮಿಕವಾಗಿ ಶ್ರೇಷ್ಠತೆಯನ್ನು ಹೊಂದಿದೆ. ಜೊತೆಗೆ ಊಟದ ನಂತರ ಪಾನಬೀಡ(ಎಲೆ ಅಡಿಕೆ) ಅಂದರೆ ವೀಳ್ಯದೆಲೆ ಸೇವನೆ ಹಿಂದಿನಿಂದ ಬಂದ ಪದ್ಧತಿಯಲ್ಲೊಂದು.
ಎಲೆಡಿಕೆ’ ಸೇವನೆಯಿಂದ ಆರೋಗ್ಯ ಸುಧಾರಣೆ ಹಿನ್ನೆಲೆ ಪಾರಂಪರಿಕವಾಗಿ ನಮ್ಮ ದೇಶದ ಭೋಜನ ನಂತರ ವೀಳ್ಯದೆಲೆ ಸೇವನೆ ಮಾಡುವ ವಾಡಿಕೆ. ಕಾರಣ ವೀಳ್ಯದೆಲೆಯಲ್ಲಿ ನಾರಿನಂಶ ಇರುವದರಿಂದ ಜೀರ್ಣಕ್ರಿಯೆ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಮತ್ತು ಮಲಬದ್ಧತೆ, ಮಧುಮೇಹ, ಅ, ರಕ್ತ ಹೀನತೆ ಸೇರಿದಂತೆ ಎದೆಯುರಿ, ಆಮ್ಲೀಯತೆಯಂತಹ ಜೀರ್ಣಕಾರಿ ಸಮಸ್ಯೆಗಳು ದೂರವಾಗಲಿವೆ.
ಈ ವೀಳ್ಯದೆಲೆಯಲ್ಲಿ ಆಂಟಿಮೈಕ್ರೋಬಿಲ್ ಗುಣಲಕ್ಷಣಗಳನ್ನು ಹೊಂದಿರುವ ಹಿನ್ನೆಲೆ ಆಹಾರದ ನಂತರ ತಿನ್ನುವುದರಿಂದ ಬಾಯಿಯ ದುರ್ವಾಸನೆ ಜೊತೆಗೆ ಹಲ್ಲು ಹುಳುಕಾಗುವುದನ್ನು ಸಹ ತಡೆಯುತ್ತದೆ.
ಮತ್ತು ಈ ಎಲೆಯಲ್ಲಿ ಆಂಟಿ-ಹೈಪರ್ಗೈಸೆಮಿಕ್ ಗುಣಲಕ್ಷಣಗಳಿದ್ದು ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಊಟದ ನಂತರ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಹೀಗಾಗಿ ಪೂರ್ವಜರು ಊಟದ ನಂತರ ವೀಳ್ಯದೆಲೆ ಸೇವನೆ ಪದ್ಧತಿ ಹಾಕಿದ್ದರು ಎಂಬುದು ಅಧ್ಯಯನ ದಿಂದ ತಿಳಿದು ಬರುತ್ತದೆ
ಸೂಚನೆ ಇದು ಕೇವಲ ನುರಿತ ಆಯುರ್ವೇದಿಕ ತಜ್ಞರಿಂದ ಮಾಹಿತಿ ಪಡೆದು ಬರೆಯಲಾಗಿದೆ. ಯಾವುದಕ್ಕೂ ತಜ್ಞ ವೈದ್ಯರ ಸಲಹೆ ಪಡೆದು ಸೇವಿಸುವದು ಒಳಿತು.
-ಎಂ.ಎಸ್.ಮುದ್ನೂರ.