ಪ್ರಮುಖ ಸುದ್ದಿ

ವಿಕಲಚೇತನರಲ್ಲಿ ವಿಶೇಷ ಶಕ್ತಿ, ಪ್ರತಿಭೆ ಇರಲಿದೆ – ಗದ್ದುಗೆ

ಅಗಲಿದ ಆಧ್ಯಾತ್ಮಿಕ ಚೇತನ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

ವಿಕಲಚೇತನರಲ್ಲಿ ವಿಶೇಷ ಶಕ್ತಿ, ಪ್ರತಿಭೆ ಇರಲಿದೆ – ಗದ್ದುಗೆ

ಅಗಲಿದ ಆಧ್ಯಾತ್ಮಿಕ ಚೇತನ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

yadgiri ಶಹಾಪುರಃ ವಿಕಲಚೇತನರು ಅಬಲರಲ್ಲ ಅವರೆಲ್ಲ ಸಬಲರು. ಅವರಿಗೆ ಸೂಕ್ತ ಕೆಲಸ ಕಾರ್ಯಗಳ ಜವಬ್ದಾರಿ ನೀಡಿದ್ದಲ್ಲಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲವರಾಗಿದ್ದಾರೆ ಎಂದು ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.
ನಗರದ ತಾಪಂ ಕಚೇರಿ ಆವರಣದಲ್ಲಿ ತಾಲೂಕಾ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ವಿವಿದುದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರಿಗೆ ಭಗವಂತ ಜನ್ಮದಿಂದಲೇ ಪ್ರತಿಭೆ ಮತ್ತು ವಿಶಿಷ್ಟ ಶಕ್ತಿಯನ್ನು ತುಂಬಿರುತ್ತಾನೆ. ಸಮಾಜ ಅವರನ್ನು ಕನಿಷ್ಟರೆಂದು ಪರಿಗಣಿಸದೆ ಅವರನ್ನು ಸಾಕ್ಷಾತ್ ಭಗವಂತನಿಂದ ವಿಶೇಷ ಶಕ್ತಿ ಪಡೆದವರೆಂದು ಪರಿಗಣಿಸಬೇಕು. ಅಂತಹ ನೈಪುಣ್ಯತೆ, ಪ್ರತಿಭೆ ಅವರಲ್ಲಿರುತ್ತದೆ ಎಂದರು.

ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ ಮಾತನಾಡಿ, ಪ್ರತಿಯೊಬ್ಬ ವಿಕಲಚೇತನರಲ್ಲಿ ವಿಶಿಷ್ಠ ಪ್ರತಿಭೆ, ಅಗಾಧವಾದ ಶಕ್ತಿ ಇರಲಿದೆ. ಅದು ಜನ್ಮತಃ ಭಗವಂತ ಅವರಿಗೆ ನೀಡಿದ ಕೊಡುಗೆ. ಈ ನಾಡಿನಲ್ಲಿ ಶೇ.75 ರಷ್ಟು ಶರೀರ ನ್ಯೂನ್ಯತೆ ಹೊಂದಿರುವ ವ್ಯಕ್ತಿ ಅಗಾಧ ಸಾಧನೆ ಮಾಡಿದ ಉದಾಹರಣೆಗಳಿವೆ. ಅಂತವರನ್ನು ಮಾದರಿಯಾಗಿಟ್ಟುಕೊಂಡು ವಿಕಲಚೇತನರು ಸಾಧನೆಯ ಮಾರ್ಗ ಕಂಡುಕೊಳ್ಳಬೇಕು. ಸಮಾಜವು ಸಹ ವಿಕಲಚೇತನರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿ ಇರುವ ಪ್ರತಿಭೆ ಹೊರ ಸೂಸುವ ಕೆಲಸ ಮಾಡಬೇಕಿದೆ ಎಂದರು.

ಕನ್ನಡಪರ ಹೋರಾಟಗಾರ ಭೀಮಣ್ಣ ಶಖಾಪುರ, ರೈತ ಮುಖಂಡ ಲಕ್ಷ್ಮೀಕಾಂತ ಪಾಟೀಲ್, ಜಿಲ್ಲಾ ಎಪಿಡಿ ಸಂಯೋಜಕ ಮಧುಕೇಶವ, ಕರಣ ಸುಬೇದಾರ ಮಾತನಾಡಿದರು. ಮುಂಚಿತವಾರಿ ನಡೆದಾಡುವ ದೇವರು, ಆಧ್ಯಾತ್ಮಿಕ ಜೀವಿ, ಪ್ರವಚನ ರತ್ನ, ಜ್ಞಾನಯೋಗಿ ಶ್ರೀಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಶ್ರೀಗಳ ಅಗಲಿಕೆಯಿಂದಾಗ ಆಯೋಜಕರು ಯಾವುದೇ ಹಾರ ತುರಾಯಿಗೆ ಆಸ್ಪದೆ ನೀಡದೆ ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿದರು.

ತಾವಿಜೇ.ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಾಹೇಬ ಜಾನಿ ಅಧ್ಯಕ್ಷತೆವಹಿಸಿದ್ದರು. ತಾಪಂ ಇಓ ಸೋಮಶೇಖರ ಬಿರೆದಾರ, ವೈಧ್ಯಾಧಿಕಾರಿ ಡಾ.ಪದ್ಮಾಕರ ಗಾಯಕವಾಡ, ಮೌನೇಶ ಹಳಿಸಗರ, ಸಂಘದ ವಿಭಾಗೀಯ ಅಧ್ಯಕ್ಷ ಸಂಹಗಾರಡ್ಡಿ ಧನರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಸವರಾಜ ಸಿನ್ನೂರ ನಿರೂಪಿಸಿದರು. ಮಲ್ಲಿಕಾರ್ಜುನ ನಾಟೇಕಾರ ಸ್ವಾಗತಿಸಿದರು. ನಾಗರಾಜ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button