ಪ್ರಮುಖ ಸುದ್ದಿ
ಕಿಡಿಗೇಡಿಗಳಿಂದ ವಿಷ್ಣು ಪ್ರತಿಮೆ ಧ್ವಂಸಃ ಪ್ರತಿಭಟನೆ
ಕಿಡಿಗೇಡಿಗಳಿಂದ ವಿಷ್ಣು ಪ್ರತಿಮೆ ಧ್ವಂಸ ಕೃತ್ಯ
ಬೆಂಗಳೂರಃ ಇಲ್ಲಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ ಖ್ಯಾತ ಹಿರಿಯ ಚಿತ್ರ ನಟ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ವಿಷ್ಣು ಅಭಿಮಾನಿಗಳು ಘಟನೆ ಖಂಡಿಸಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಈ ಮೊದಲೊಮ್ಮೆ ಪ್ರತಿಮೆಯನ್ನೆ ಕಿಡಿಗೇಡಿಗಳು ಹೊತ್ತೊಯ್ದಿದ್ದರು. ಓರ್ವ ಕರುನಾಡು ಹಿರಿಯ ಕಲಾವಿದನನ್ನು ಅವಮಾನ ಗೊಳಿಸುವ ಕೃತ್ಯಗಳು ನಡೆಯುತ್ತಿವೆ.
ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ವಿಷ್ಣು ಅಭಿಮಾನಿಗಳು ಆಗ್ರಹಿಸಿದ್ದಾರೆ. ಮಾಗಡಿ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.