ಶಹಾಪುರಃ ಹೈಟೆಕ್ ವೇಶ್ಯವಾಟಿಕೆ-ನಾಲ್ವರ ಬಂಧನ
ಹೈಟೆಕ್ ವೇಶ್ಯವಾಟಿಕೆ ಬ್ಲ್ಯಾಕ್ ಮೇಲ್ ಹಣ ಸುಲಿಗೆ
ವೇಶ್ಯಾವಾಟಿಕೆ ದಂಧೆ ಬೇಧಿಸಿ ನಾಲ್ವರ ಬಂಧನ
ಯಾದಗಿರಿ, ಶಹಾಪುರಃ ಹೈಟೆಕ್ ವೇಶ್ಯಾವಾಟಿಕೆ ಅಡ್ಡಾ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿತರು ಸೇರಿದಂತೆ 98 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಗರದ ಹಾಲಬಾವಿ ರಸ್ತೆಯಲಿರುವ ಕನಕ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ವೇಶ್ಯಾವಾಟಿಕೆ ಅಲ್ಲದೆ ಮಹಿಳೆಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ಆರೋಪಿತರು ಹಣ ಕೀಳುತ್ತಿದ್ದಾರೆ ಎಂಬ ದೂರು ಬಂಧ ಹಿನ್ನೆಲೆ ದಾಳಿ ನಡೆಸಿ ಆರೋಪಿತರನ್ನು ಬಂಧಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಕೊಂಡಿದ್ದಾರೆ.
ಹಣದ ಆಮಿಷದ ಮೂಲಕ ಹುಡುಗಿಯರನ್ನು ಕರೆ ತಂದು ದಂಧೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಮೂಲಕ ವಿಡಿಯೋ ಮಾಡಿಕೊಂಡು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಂದ ಆರ್ಥಿಕ ಸ್ಥಿತಿವಂತರನ್ನು ವಂಚಿಸಿ ಲಕ್ಷಗಟ್ಟಲೇ ದುಡ್ಡು ಕೀಳುತ್ತಿದ್ದರು ಎಂಬ ಆರೋಪವು ಇವರ ಮೇಲಿದೆ.
ಪೊಲೀಸರ ದಾಳಿ ಸಂದರ್ಭದಲ್ಲಿ ಆರೋಪಿ ಸಿದ್ಧನಗೌಡ ಡೀಲ್ ಮೂಲಕ 3 ಲಕ್ಷ ರೂ.ಪಡೆಯುತ್ತಿರುವಾಗ ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದಂತೆ ಇನ್ನೂ ಮೂವರು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಎಸ್ಪಿ ರಿಷಿಕೇಶ ಭಾಗವಾನ್ ಮತ್ತು ಡಿವೈಎಸ್ಪಿ ಶಿವನಗೌಡ ಪಾಟೀಲ್ ಅವರ ಸೂಕ್ತ ಮಾರ್ಗದರ್ಶನದಲ್ಲಿ ಪಿಐ ಹನುಮರಡ್ಡೆಪ್ಪನವರ ನೇತೃತ್ವದಲ್ಲಿ ಎಎಸೈ, ವೆಂಕಣ್ಣ ಎಚ್‍ಸಿ, ಪೊಲೀಸರಾದ ಮಲ್ಲಣ್ಣ ದೇಸಾಯಿ, ಹೊನ್ನಪ್ಪ ಭಜಂತ್ರಿ, ಬಾಬು ನಾಯ್ಕಲ್ ಮತ್ತು ಶಿವನಗೌಡ ಪಾಟೀಲ್, ಶಿವರಾಜ, ಭಾಗಣ್ಣ, ದೇವರಾಜ, ವೆಂಕಟೇಶ, ಭೀಮನಗೌಡ ದಾಳಿ ತಂಡದಲ್ಲಿದ್ದರು.
ಕುಕೃತ್ಯಗಳ ತಡೆಗೆ ಜನರ ಸಹಕಾರ ಅಗತ್ಯ
ನಗರದಲ್ಲಿ ವೇಶ್ಯಾವಾಟಿಕೆ ದಂದೆಯಲ್ಲಿ ನಡೆಸುವ ಆರೋಪಿತರು, ಕೆಲವರನ್ನು ಬ್ಲಾಕ್ ಮೇಲ್ ಮಾಡಿದ್ದು, ಹಣ ಕೀಳಿದ್ದು, ಮಾನಸಿಕ ಹಿಂಸೆ ನೀಡಿರುವ ಕುರಿತು ದೂರು ಬಂದಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ದಾಳಿ ನಡೆಸಿ ಆರೋಪಿತರನ್ನು ಬಂಧಿಸಲಾಗಿದೆ.
ಇಂತಹ ದಂಧೆಗಳಿಗೆ ಕಡಿವಾಣ ಅಗತ್ಯವಿದ್ದು, ವಂಚಿತಗೊಂಡವರಿದ್ದಲ್ಲಿ ಠಾಣೆಗೆ ಬಂದು ದೂರು ಸಲ್ಲಿಸಬೇಕು. ಅಪರಾಧಿಕ ಕೃತ್ಯಗಳ ತಡೆಗೆ ಜನರ ಸಹಕಾರ ಮುಖ್ಯ. ಆಗಲೇ ಇಂತಹ ಕೃತ್ಯ ನಡೆಸುವರನ್ನು ಸದೆ ಬಡೆಯಲು ಸಾಧ್ಯ.
–ಶಿವನಗೌಡ ಪಾಟೀಲ್. ಡಿವೈಎಸ್‍ಪಿ. ಸುರಪುರ.