ಪ್ರಮುಖ ಸುದ್ದಿ
ಬಿಎಸ್ ವೈ ಸರ್ಕಾರಕ್ಕೆ ವಾಲ್ಮೀಕಿ ಶ್ರೀ ಖಡಕ್ ವಾರ್ನಿಂಗ್!
ಬೆಂಗಳೂರು : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಗಳನ್ನು ನೇಮಿಸುತ್ತಿರುವ ಮಾಹಿತಿಯ ಬೆನ್ನಲ್ಲೇ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ ಸುದ್ದಿಗೋಷ್ಠಿ ನಡೆಸಿ ನಾಯಕ ಸಮುದಾಯದವ್ರಿಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹಿಸಿದ್ದಾರೆ. ನಾಯಕ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದ್ದು ಅನ್ಯಾಯ ಸರಿಪಡಿಸಬೇಕು. ಅಂತೆಯೇ ಎಸ್ಟಿ ಸಮುದಾಯಕ್ಕೆ 3.5 ಮೀಸಲಾತಿ ಮಾತ್ರ ಜಾರಿಯಲ್ಲಿದ್ದು ನ್ಯಾಯಬದ್ಧವಾದ 7.5ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ನಿರಂತರ ಹೋರಾಟ ಅನಿವಾರ್ಯವಾಗುತ್ತದೆ ಎಂದು ವಾಲ್ಮೀಕಿಶ್ರೀ ಎಚ್ಚರಿಕೆ ನೀಡಿದ್ದಾರೆ.