ಪ್ರಮುಖ ಸುದ್ದಿ

ದಾರುಣ ಘಟನೆ: ಗೋಡೆ ಕುಸಿದು ಬಿದ್ದು ನಿದ್ರೆಯಲ್ಲಿದ್ದ ತಾಯಿ-ಮಗು ಚಿರನಿದ್ರೆಗೆ!

ದಾವಣಗೆರೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು ಬಿದ್ದು ತಾಯಿ-ಮಗ ಸಾವನ್ನಪ್ಪಿದ್ದ ದಾರುಣ ಘಟನೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆದಿದೆ. ಉಮಾದೇವಿ (30), ಧನುಷ್ಯ (03) ಕುಸಿದು ಬಿದ್ದ ಗೋಡೆ ಅಡಿ ಸಿಲುಕಿ ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ರಾತ್ರಿ ಮಲಗಿದ್ದ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದ್ದು ರಕ್ಷಣಕ್ಕೆ ಗಾಯಗೊಂಡವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಮಾರ್ಗ ಮದ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಸಂತೆಬೆನ್ನೂರು‌ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button