ಕಾವ್ಯ
ಪ್ರೀತಿಯ ಜನ್ಮ ಹೀಗೇಕೆ..? ಭಾವನೆಗೆ ಬರವಣಿಗೆಯ ರೂಪ
ಓ..ಪ್ರೀತಿ..ನೀನೇಕೆ ಹೀಗೆ.?
ಓ..ಪ್ರೀತಿಯೇ ಓ..ಪ್ರೀತಿಯೇ ನೀನು ಏಕೆ ಹೀಗೆ..?
ಹೇಳದೇ ಕೇಳದೆ ಬರುವೆಯಲ್ಲ..ಸೌಜನ್ಯ ನಿನಗಿಲ್ವಾ.?
ನಿನಗೆ ಹುಟ್ಟು ಮಾತ್ರವೇ..ನಿನಗೆ ಹುಟ್ಟು ಮಾತ್ರವೇ.?
ಆ ಯಮರಾಯನ ಪಟ್ಟಿಯಲ್ಲಿ ನಿನ್ನ ಹೆಸರು ಇಲ್ವಲ್ಲಾ..
ನನ್ನ ಹೃದಯದಲ್ಲಿ ಎಷ್ಟು ಬಾರಿ ನಿನ್ನ ಕೊಂದರೂ.!
ಮತ್ತೆ ಆ ರಕ್ತ ಬಿಜಾಸೂರನಂತೆ ಹುಟ್ಟಿಕೊಳ್ಳುತ್ತಿರುವೆಯಲ್ಲಾ..
ನಿನಗೆ ಕಣ್ಣು ಇಲ್ಲ..ನಿನಗೆ ಕಣ್ಣು ಇಲ್ಲಾ.!
ಆದರೂ ನನಗೆ ನಿನ್ನ ನೋಟ ಅರ್ಥವಾಗುತ್ತದೆಯಲ್ಲಾ..
ನಿನಗೆ ರೂಪವಿಲ್ಲ ನಿನಗೆ ರೂಪವಿಲ್ಲ.!
ಆದ್ರೂ ನೀನು ಅದೆಷ್ಟು ಸುಂದರ ಕಾಣುತ್ತಿಯಲ್ಲಾ..
ನಿನಗೆ ಮಾತು ಇಲ್ಲ.. ನಿನಗೆ ಮಾತು ಇಲ್ಲಾ..!
ಆದ್ರೂ ನಿನ್ನ ಭಾವನೆ ನನಗೆ ಕೇಳುತ್ತಿದೆಯಲ್ಲಾ..
ನೀನು ಪರಿಶುದ್ಧ ಹಾಲಿನಂತೆ ಇದ್ದೀಯಲ್ಲ.!
ಆದ್ರೂ ಎರಡು ಹೃದಯ ಹೊಂದಾಗುವದಕ್ಕೆ ಹಣ,
ಜಾತಿ, ಮತಗಳ ನಡುವೇ ಸಿಲುಕಿ ಕೊಂಡೆಯಲ್ಲಾ..ಸಿಲುಕಿ ಕೊಂಡೆಯಲ್ಲಾ..
-ರೂಪಾ.
ಭಾವನೆಗೆ ನೀಡಿದ ಬರವಣಿಗೆಯ ರೂಪ.