ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ದೌರ್ಜನ್ಯ ಖಂಡನೀಯ
ಯಾದಗಿರಿ:ನಗರದ ಸುಭಾಸ ಚೌಕ ಹತ್ತಿರ ಬಿಜೆಪಿ ನಗರ ಮಂಡಲ ವತಿಯಿಂದ ಮೌನ ಪ್ರತಿಭಟನೆ ಮಾಡಲಾತು,ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ ಅವರು ಪಶ್ಚಿಮ ಬಂಗಾಲದಲ್ಲಿ ವಿಧಾನ ಸಭೆ ಚುನಾವಣೆ ಆದ ಬಳಿಕ ಆ ರಾಜ್ಯದಲ್ಲಿ ಅಭೂತಪೂರ್ವ ಸ್ಥಾನ ಗಳಿಸಿ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಹತ್ಯೆಗೈದು ಆಸ್ತಿ ಪಾಸ್ತಿ ಹಾನಿ ಮಾಡಿರುವುದನ್ನು ಖಂಡನೀಯವಾಗಿದೆ ಎಂದರು.
ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 2ನೇ ಸ್ಥಾದಲ್ಲಿದ್ದು, 75ಕ್ಕೂ ಹೆಚ್ಚು ಸ್ಥಾನ ಗಳಿಸಿದೆ, 90 ಕಡೆಗಳಲ್ಲಿ 1ಸಾವಿರ ಅಂತರದ ವೀರೋಚಿತ ಸೋಲು ಕಂಡಿದೆ, ಇದನ್ನು ಸಹಿಸದೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಗೂಂಡಾಗಳು ಕ್ರೌರ್ಯ ಮೆರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ ಮಾತನಾಡಿದ ಅವರು ಟಿಎಂಸಿ ಪಕ್ಷದ ಕಾರ್ಯಕರ್ತರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ,ಚುನಾವಣೆಯಲ್ಲಿ ಪೈಪೆÇೀಟಿ ಸಹಜ ಬಳಿಕ ಯಾವುದೇ ದ್ವೇಷ ,ವೈಯುಕ್ತಿಕ ಹೋರಾಟ ,ಹೊಡೆದಾಟದಲ್ಲಿ ಬಿಜೆಪಿ ನಂಬಿಕೆ ಇರಿಸಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರೆಡ್ಡಿ ಅಬ್ಬೆತುಮಕೂರು,ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್,ನಗರಸಭೆ ಸದಸ್ಯ ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ,ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಖಾನಾಪೂರ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ,ಸುನಿತಾ ಚವ್ಹಾಣ್,ಶಕುಂತಲಾ ಜಿ,ಮಲ್ಲನಗೌಡ ಗುರುಸುಣಗಿ, ದೀಪಕ್, ಹಣಮಂತ ವಲ್ಲೆಪುರೆ, ಶಿವರಾಜ್ ದಾಸನಕೆರಿ, ಸಾಬು ಚಂಡ್ರಕಿ, ಪರವೀನ್ ಬೇಗಂ,ಇಮಾನ್ವೆಲ್ ಜಿಮ್ಮಿ,ಗುರು ಗುರುಸುಣಗ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರದ್ದು.