ಪ್ರಮುಖ ಸುದ್ದಿ

2ನೇ ಹಂತದ ಗ್ರಾ.ಪಂ.ಚುನಾವಣೆಗೆ ಜಿಲ್ಲಾಡಳಿತ ಸಿದ್ದತೆ: ಡಾ. ರಾಗಪ್ರಿಯ

2ನೇ ಹಂತದ ಗ್ರಾ.ಪಂ.ಚುನಾವಣೆಗೆ ಜಿಲ್ಲಾಡಳಿತ ಸಿದ್ದತೆ: ಡಾ. ರಾಗಪ್ರಿಯ
ಯಾದಗಿರಿ- ಜಿಲ್ಲೆಯ ಯಾದಗಿರಿ, ಗುರುಮಿಠಕಲ್ ಹಾಗೂ ವಡಗೇರಾ ತಾಲ್ಲೂಕಿನ 56 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಚುನಾವಣಾ ಮತದಾನವು ಇದೇ ಡಿ.27ರಂದು ನಡೆಯುತ್ತಿದ್ದು, ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.

ಯಾದಗಿರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ, ಗುರುಮಿಠಕಲ್ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ವಡಗೇರಾ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಡಿ.27ರ ಭಾನುವಾಋ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರಿಗೆ ಮತದಾನ ನಡೆಯಲಿದೆ.

ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು: ಯಾದಗಿರಿ ತಾಲ್ಲೂಕಿನಲ್ಲಿ 459 ಸ್ಥಾನಗಳಲ್ಲಿ 99 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಚುನಾವಣೆ ನಡೆಯಲಿರುವ 360 ಸ್ಥಾನಗಳಿಗೆ 858 ಅಭ್ಯರ್ಥಿಗಳು, ಗುರುಮಿಠಕಲ್ ತಾಲ್ಲೂಕಿನಲ್ಲಿ 302 ಸ್ಥಾನಗಳಲ್ಲಿ 68 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆಯಲಿರುವ 234 ಸ್ಥಾನಗಳಿಗೆ 581 ಅಭ್ಯರ್ಥಿಗಳು ಹಾಗೂ ವಡಗೇರಾ ತಾಲ್ಲೂಕಿನಲ್ಲಿ 283 ಸ್ಥಾನಗಳಲ್ಲಿ 40 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಚುನಾವಣೆ ನಡೆಯಲಿರುವ 243 ಸ್ಥಾನಗಳಿಗೆ 631 ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ.

ಮತದಾರರು: ಯಾದಗಿರಿ ತಾಲ್ಲೂಕಿನಲ್ಲಿ 67,103 ಪುರುಷ ಮತದಾರರು, 67,599 ಮಹಿಳಾ ಮತದಾರರು, 03 ಮಂದಿ ಇತರೆ ಮತದಾರರು ಸೇರಿದಂತೆ ಒಟ್ಟಾರೆ 1,34,705 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಗುರುಮಿಠಕಲ್ ತಾಲ್ಲೂಕಿನಲ್ಲಿ 45,884 ಪುರುಷ ಮತದಾರರು, 46,463 ಮಹಿಳಾ ಮತದಾರರು, ಒಬ್ಬರು ಇತರೆ ಒಟ್ಟು 92,348 ಮತದಾರರಿದ್ದಾರೆ. ವಡಗೇರಾ ತಾಲ್ಲೂಕಿನಲ್ಲಿ 45,372 ಪುರುಷ ಮತದಾರರು 44,858 ಮಹಿಳಾ ಮತದಾರರು ಹಾಗೂ ಇಬ್ಬರು ಇತರೆ ಸೇರಿದಂತೆ ಒಟ್ಟಾರೆ 90,232 ಮತದಾರಿದ್ದಾರೆ. ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 1,58,359 ಪುರುಷ ಮತದಾರರು, 1,58,920 ಮಹಿಳಾ ಮತದಾರರು ಹಾಗೂ 06 ಜನ ಇತರೆ ಮತದಾರರನ್ನೊಳಗೊಂಡಂತೆ ಒಟ್ಟು 3,17,285 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಮತಗಟ್ಟೆಗಳು: ಯಾದಗಿರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ 164 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 134 ಕ್ಷೇತ್ರಗಳಲ್ಲಿ 199 ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ. ಗುರುಮಿಠಕಲ್ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ 106 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಉಳಿದ 87 ಕ್ಷೇತ್ರಗಳಲ್ಲಿ 133 ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ.

ಹಾಗೂ ವಡಗೇರಾ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ 98 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಉಳಿದ 90 ಕ್ಷೇತ್ರಗಳಲ್ಲಿ 111 ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ. ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 443 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮತಗಟ್ಟೆ ಸಿಬ್ಬಂದಿ: ಡಿ.27ರಂದು ನಡೆಯುವ ಮತದಾನಕ್ಕಾಗಿ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾದಗಿರಿ ತಾಲ್ಲೂಕಿಗೆ 887 ಮತಗಟ್ಟೆ ಸಿಬ್ಬಂದಿಗಳನ್ನು, ಗುರುಮಿಠಕಲ್ ತಾಲ್ಲೂಕಿಗೆ 598 ಮತಗಟ್ಟೆ ಸಿಬ್ಬಂದಿಗಳನ್ನು, ಮತ್ತು ವಡಗೇರಾ ತಾಲ್ಲೂಕಿಗೆ 493 ಮತಗಟ್ಟೆ ಸಿಬ್ಬಂದಿಯವರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ.

ಮಸ್ಟರಿಂಗ್ ಡಿ ಮಸ್ಟರಿಂಗ್ ಕೇಂದ್ರಗಳು: ಡಿ.26ರಂದು ಯಾದಗಿರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಯಾದಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜು, ಗುರುಮಿಠಕಲ್ ತಾಲ್ಲೂಕಿಗೆ ಸಂಬಂಧಿಸಿದಂತೆ ಗುರುಮಿಠಕಲ್‍ನ ಸರಕಾರಿ ಪದವಿ ಕಾಲೇಜು ಹಾಗೂ ವಡಗೇರಾ ತಾಲ್ಲೂಕಿಗೆ ಸಂಬಂಧಿಸಿದಂತೆ ವಡಗೇರಾದ ಸರಕಾರಿ ಪ್ರೌಢ ಶಾಲೆಯ ಹೊಸ ಕಟ್ಟಡದಲ್ಲಿ ಮಸ್ಟರಿಂಗ್ ಮತ್ತು ಮತದಾನ ಮುಕ್ತಾಯವಾದ ನಂತರ ಡಿ-ಮಸ್ಟರಿಂಗ್ ಪ್ರಕ್ರಿಯೆಗಳು ನಡೆಯಲಿವೆ.

ಎಂ.ಸಿ.ಸಿ ತಂಡಗಳು: ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಯಾದಗಿರಿ ತಾಲ್ಲೂಕಿಗೆ 03 ಕ್ಷಿಪ್ರ ಸಂಚಾರಿ ದಳ (ಎಫ್.ಎಸ್.ಟಿ) ಹಾಗೂ 11 ಸೆಕ್ಟರ್ ಆಫೀಸರ್ಸ್ ತಂಡ, ಗುರುಮಿಠಕಲ್ ತಾಲ್ಲೂಕಿಗೆ 03 ಕ್ಷಿಪ್ರ ಸಂಚಾರಿ ದಳ (ಎಫ್.ಎಸ್.ಟಿ)À ಹಾಗೂ 07 ಸೆಕ್ಟರ್ ಆಫೀಸರ್ಸ್ ತಂಡ ಹಾಗೂ ವಡಗೇರಾ ತಾಲ್ಲೂಕಿಗೆ 03 ಕ್ಷಿಪ್ರ ಸಂಚಾರಿ ದಳ (ಎಫ್.ಎಸ್.ಟಿ) 09 ಸೆಕ್ಟರ್ ಆಫೀಸರ್ಸ್ ತಂಡಗಳನ್ನು ರಚಿಸಲಾಗಿದೆ.

ಪೊಲೀಸ್ ಬಂದೋಬಸ್ತ್: ಡಿ.27ರಂದು ನಡೆಯಲಿರುವ ಚುನಾವಣಾ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಒದಗಿಲಾಗಿದೆ. ಯಾದಗಿರಿ ತಾಲ್ಲೂಕಿಗೆ ಒಬ್ಬರು ಡಿ.ವೈ.ಎಸ್.ಪಿ, 03 ಜನ ಸಿ.ಪಿ.ಐ, 10 ಜನ ಪಿ.ಎಸ್.ಐ, 10 ಜನ ಎ.ಎಸ್.ಐ, 60 ಜನ ಎಚ್.ಸಿ, 138 ಜನ ಪಿ.ಸಿ, 45 ಜನ ಹೋಂ ಗಾಡ್ರ್ಸ ಹಾಗೂ 11 ಮೊಬೈಲ್ ಪೊಲೀಸ್ ಸೆಕ್ಟರ್ ಸಿಬ್ಬಂದಿ ಸೇರಿ ಒಟ್ಟು 278 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಗುರುಮಿಠಕಲ್ ತಾಲ್ಲೂಕಿಗೆ ಒಬ್ಬರು ಡಿ,ವೈ.ಎಸ್.ಪಿ, 02 ಜನ ಸಿ.ಪಿ ಐ, 03 ಜನ ಪಿ.ಎಸ್.ಐ, 8 ಜನ ಎ.ಎಸ್.ಐ, 40 ಜನ ಎಚ್.ಸಿ, 91 ಜನ ಪಿ.ಸಿ, 51 ಜನ ಹೋಂ ಗಾಡ್ರ್ಸ ಹಾಗೂ 9 ಮೊಬೈಲ್ ಪೊಲೀಸ್ ಸೆಕ್ಟರ್ ಹೀಗೆ ಒಟ್ಟು 208 ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ ಮತ್ತು ವಡಗೇರಾ ತಾಲ್ಲೂಕಿಗೆ 02 ಜನ ಸಿ.ಪಿ ಐ, 04ಜನ ಪಿ.ಎಸ್.ಐ, 8 ಜನ ಎ.ಎಸ್.ಐ, 35 ಜನ ಎಚ್.ಸಿ, 80ಜನ ಪಿ.ಸಿ, 23 ಜನ ಹೋಂ ಗಾಡ್ರ್ಸ ಹಾಗೂ 7 ಮೊಬೈಲ್ ಪೊಲೀಸ್ ಸೆಕ್ಟರ್ ಹೀಗೆ ಒಟ್ಟು 159 ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.

ಅತೀ ಸೂಕ್ಷ್ಮ ಮತಗಟ್ಟೆಗಳು: ಡಿ.27ರಂದು ನಡೆಯಲಿರುವ ಮತದಾನಕ್ಕಾಗಿ ಯಾದಗಿರಿ ತಾಲ್ಲೂಕಿನಲ್ಲಿ 31, ಗುರುಮಿಠಕಲ್ ತಾಲ್ಲೂಕಿನಲ್ಲಿ 23 ಮತ್ತು ವಡಗೇರಾ ತಾಲ್ಲೂಕಿನಲ್ಲಿ 18 ಒಟ್ಟು 72 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಮತದಾನ ದಿನದಂದು ಈ ಮತಗಟ್ಟೆಗಳಲ್ಲಿ ವಿಡಿಯೋಗ್ರಾಫ್ü ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಮತದಾರರು ಹಾಗೂ ಅಭ್ಯರ್ಥಿಗಳು ಮತದಾನ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಶಾಂತ ರೀತಿಯಿಂದ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Related Articles

Leave a Reply

Your email address will not be published. Required fields are marked *

Back to top button