ಹದಿಮೂರು ಒಂಟೆಗಳನ್ನು ರಕ್ಷಿಸಿದ ಪೊಲೀಸರು.!
ಅಕ್ರಮ ಒಂಟೆ ಸಾಗಣೆ ಮಾಡುತ್ತಿದ್ದುದೇಕೆ ಗೊತ್ತಾ..?
ಬೀದರಃ ಗೋವುಗಳ ಅಕ್ರಮ ಸಾಗಣೆ ಮಾಡೋದು. ಖಸಾಯಿಖಾನೆಗಳಿಗೆ ಜಾನುವಾರುಗಳನ್ನು ಮರಾಟ ಮಾಡುವ ಅನೇಕ ಪ್ರಕರಣಗಳನ್ನು ನೀವು ಗಮನಿಸಿರಬಹುದು. ಆದರೆ ಈ ಕಿರಾತಕರು ಮಾತ್ರ ಒಂಟೆಗಳನ್ನೇ ಅಕ್ರಮ ಸಾಗಣೆ ಮಾಡುತ್ತಿದ್ದರಂತೆ.
ಉತ್ತರ ಪ್ರದೇಶದಿಂದ ಬೀದರಿಗೆ ಒಂಟೆಗಳ ಕಳ್ಳಸಾಗಣೆ ಮಾಡಲಾಗುತಿತ್ತಂತೆ. ಹೀಗಾಗಿ, ಖಚಿತ ಮಾಹಿತಿ ಪಡೆದ ಇಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿ 13 ಒಂಟೆಗಳ ರಕ್ಷಣೆ ಮಾಡಿದ್ದಾರೆ. ಬೀದರ್ ಮಾರ್ಕೇಟ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ನಗರದ ಚಿಕ್ ಪೇಟೆ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳನ್ನು ರಕ್ಷಿಸಿದ್ದಾರೆ.
ಅಲ್ಲದೆ ತಾಲೂಕಿನ ಸುಲ್ತಾನಪುರ ಗ್ರಾಮ ಬಳಿ ಒಂಟೆಗಳನ್ನು ಕಡಿದು ಇದರ ಮಾಂಸವನ್ನು ಹೈದ್ರಾಬಾದ್ ಕ್ಕೆ ರವಾನೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು, ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ನಾಲ್ವರನ್ನಯ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಓರ್ವ ಪ್ರಮುಖ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನೆತ್ತಿಖಾನ್, ಬಕ್ಕಾಜಿ, ದಿನೇಶ್ ಹಾಗೂ ಅಹ್ಮದ್ ಖಾನ್ ಎಂಬ ಆರೋಪಿಗಳೇ ಬಂಧಿತರಾಗಿದ್ದಾರೆ. ಪ್ರಮುಖ ಆರೋಪಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.