ಪ್ರಮುಖ ಸುದ್ದಿ

ಪ್ರಧಾನ ಮಂತ್ರಿಯವರು ಜಿಲ್ಲೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.

ಯಾದಗಿರಿಯು ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್

ಯಾದಗಿರಿ ; ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ ಮಹತ್ವಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮ 2018 ರಲ್ಲಿ ಜಾರಿಗೆ ಬಂದಿದೆ. ಈ ಕಾರ್ಯಕ್ರಮಗಳಲ್ಲಿ ಒಳಗೊಂಡ ಜಿಲ್ಲೆಗಳ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಜಿಲ್ಲೆಗಳು ಪ್ರಗತಿಯನ್ನು ಕಾಣಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ದೇಶದಾದ್ಯಂತ ಕೈಗೊಂಡಿರುವ ಈ ಕಾರ್ಯಕ್ರಮ ಎಲ್ಲಾ ಮೂಲೆಗೂ ತಲುಪುವಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಒಟ್ಟುಗೂಡಿಸಿ ಕೇಂದ್ರ ಮತ್ತು ರಾಜ್ಯ ಪ್ರಭಾರಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಮೂಲಕ ಪ್ರತಿ ಹಂತಕ್ಕೂ ತಲುಪುವ ನೋಟ ಹೊಂದಿರುವ ಕಾರ್ಯಕ್ರಮ ಇದಾಗಿದೆ.

” ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಈ ಮಂತ್ರದ ಮೂಲಕ ಕಾರ್ಯ ನಿರ್ವಹಿಸುವದು. ಈ ಕಾರ್ಯಕ್ರಮ 112 ಅತಿ ಹಿಂದುಳಿದ ಜಿಲ್ಲೆಗಳ ಕಡಿಮೆ ಪ್ರಗತಿ ತೋರಿಸುವ ಸೂಚ್ಯಂಕಗಳ ಮೂಲಕ ಸಾಮಾಜಿಕ ಫಲಿತಾಂಶ ಹೊಂದುವಲ್ಲಿ ನೆರವಾಗುವದು. ಜಿಲ್ಲೆಗಳು ಸೂಚ್ಯಂಕಗಳ ಮೂಲಕ ಸ್ಪರ್ಧಿಸಿ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ತಮ್ಮ ಸ್ಥಾನ ಹೊಂದುವದು. ಜನತೆಯ ಆರೋಗ್ಯ ಮತ್ತು ಪೌಷ್ಟಿಕ , ಕೃಷಿ ಮತ್ತು ಜಲ ಸಂಪನ್ಮೂಲ , ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲ್ಯಾಭಿವೃದ್ದಿ ಮತ್ತು ಮೂಲಭೂತ ಸೌಕರ್ಯ ಈ ಎಲ್ಲಾ ವಲಯಗಳಲ್ಲಿ ಭಾಗವಹಿಸುವರು. 49 ಸೂಚ್ಯಂಕಗಳನ್ನು ಗುರುತಿಸಲ್ಪಟ್ಟು 5 ವಲಯಗಳನ್ನಾಗಿ ನೇಮಸಿಲಾಗಿದೆ.

ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಆಯ್ದ 5 ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಮಾತನಾಡಿ ಯಾದಗಿರಿ ಜಿಲ್ಲೆಯನ್ನು ಮಹತ್ವಾಕಾಂಕ್ಷೆ ಜಿಲ್ಲೆಯ ಯೋಜನೆಯಡಿ ಆಯ್ಕೆ ಮಾಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮತ್ತು ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಿರಂತರ ಬೆಂಬಲ ಮತ್ತು ಪ್ರೇರಣೆಯನ್ನು ನೀಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳನ್ನು ಜಿಲ್ಲಾಧಿಕಾರಿ ಅರ್ಪಿಸಿದರು.

ಯಾದಗಿರಿ ಜಿಲ್ಲೆಯು ಕರ್ನಾಟಕದ ಈಶಾನ್ಯದಲ್ಲಿ 14 ಲಕ್ಷ ಜನಸಂಖ್ಯೆ ಮತ್ತು 6 ತಾಲೂಕಗಳನ್ನು ಹೊಂದಿರುವ ಕರ್ನಾಟಕದ ಚಿಕ್ಕ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಫಲವತ್ತಾದ ಕಪ್ಪು ಮಣ್ಣನ್ನು ಹೊಂದಿದ್ದು, ಇಲ್ಲಿ ಭತ್ತ, ಹತ್ತಿ, ಕಡಲೆಕಾಯಿ ಮತ್ತು ತೊಗರಿ ಬೆಳೆ ಬೆಳೆಯಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಎರಡು ಪ್ರಮುಖ ನದಿಗಳಾದ ಕೃ ಮತ್ತು ಭೀಮಾ ನದಿಗಳಿಂದ ಆಶೀರ್ವದಿಸಿದ್ದೇವೆ. ಇಲ್ಲಿ ಸಣ್ಣ ರೈತರನ್ನು ಉಪ್ಪು ಪೀಡಿತ ಪ್ರದೇಶಗಳಲ್ಲಿ ಒಳನಾಡು ಮೀನುಗಾರಿಕೆಯನ್ನು ಕೈಗೊಳ್ಳಲು  ಹಿಸಿದ್ದೇವೆ ಮತ್ತು ಈ ವರ್ಷ 7416 ಮೆಟ್ರಿಕ್ ಟನ್ ಮೀನು ಮತ್ತು ಸೀಗಡಿಗಳನ್ನು ಉತ್ಪಾದಿಸಿದ್ದೇವೆ ಮತ್ತು ವಾರ್ಷಿಕ 180 ಕೋಟಿ ರೂಪಾಯಿ ವಹಿವಾಟು ನಡೆಸಿದ್ದೇವೆ. ಇದು ಹಿಂದಿನ ವರ್ಷಗಳಿಗಿಂತ ಶೇಕಡಾವಾರು 50 ರಷ್ಟು ಹೆಚ್ಚಾಗಿದೆ. ಹೀಗಾಗಿ ಸಣ್ಣ ರೈತರ ಆದಾಯ ವೃದ್ದಿಸುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಆರೋಗ್ಯ ಕ್ಷೇತ್ರದಲ್ಲಿ ಯಾದಗಿರಿಯಲ್ಲಿ ರಕ್ತ ಹೀನತೆಯ ನಿರಂತರ ಸಮಸ್ಯೆಗಳಿದ್ದು, ಎಲ್ಲಾ ಪಿ ಎಚ್ ಸಿ ಗಳಲ್ಲಿ ಕಡ್ಡಾಯವಾಗಿ ಹಿಮೋಗ್ಲೋಬಿನ್ ಪರೀಕ್ಷೆಯನ್ನು ಮಾಡಲು ಎಲ್ಲಾ ಆಶಾ ಕಾರ್ಯಕರ್ತೆ ಮತ್ತು ಎ ಎನ್ ಎಮ್ ಗಳ ತರಬೇತಿ ಮೂಲಕ ನಿಭಾಯಿಸಲಾಯಿತು ಮತ್ತು 13 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಪರೀಕ್ಷಿಸಿ ಅವರಲ್ಲಿ ರಕ್ತ ಹೀನತೆ ಕಂಡಬಂದಾಗ ಅವರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಯಿತು.

ಪೂರಕ ಷಣೆ ಮತ್ತು ಶಕ್ತಿ ಕಿಟ್ ಗಳನ್ನು ನೀಡಲಾಯಿತು. ಇದರ ಮೂಲಕ ರಕ್ತ ಹೀನತೆಯ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಮಾತೃ ಪೂರ್ಣ ಯೋಜನೆ ಗರ್ಭಿಣಿಯರಿಗೆ ಬೇಯಿಸಿದ ಪೌಷ್ಟಿಕಾಂಶದ ಊಟವನ್ನು ನೀಡಲಾಯಿತು. ಇದು ಕಡಿಮೆ ತೂಕದ ಶಿಶುಗಳನ್ನು ಕಡಿಮೆ ಮಾಡಲು ಕಾರಣವಾಯಿತು. ಅಂಗನವಾಡಿಯಲ್ಲಿ ಹಾಲು ಮತ್ತು ಮೊಟ್ಟೆಯನ್ನು 293 Sಂಒ ಮತ್ತು 20,000 ( ಒಂಒ)ಮಕ್ಕಳಿಗೆ ವಾರದಲ್ಲಿ 5 ದಿನಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ನೀಡಲಾಯಿತು. ಇದು ಪೌಷ್ಟಿಕತೆಯನ್ನು ಶೇಕಡಾವಾರು 30 ರಿಂದ 6 ಕ್ಕೆ ಇಳಿಸುವುದನ್ನು ಖಾತ್ರಿಪಡಿಸಿತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ 122 ಪ್ರೌಡ ಶಾಲೆಗಳಲ್ಲಿ ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪ್ರಿ ಲೋಡೆಡ್ ಪಠ್ಯಕ್ರಮ ಆಡಿಯೋ ಮತ್ತು ವಿಡಿಯೋ ಮಾದರಿಯಲ್ಲಿ ಸ್ಮಾರ್ಟ್ ಪರದೆಗಳನ್ನು ಒದಗಿಸುವ ಮೂಲಕ ಇಂಟರ್ಯಾಕ್ಟಿವ್ ಅನ್ನು ಪೆÇ್ರೀತ್ಸಾಹಿಸುವ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲಾಗಿದೆ. ತರಗತಿಗಳಲ್ಲಿ ಕಲಿಕೆ ಮತ್ತು ಹೀಗೆ ಸುಧಾರಿತ ಕಲಿಕೆ ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಸುಲಭವಾಗಿ ಗ್ರಹಿಸುವುದು ಈ ಸುಧಾರಣೆ ಒಲವಿನ ಫಲಿತಾಂಶ ಎಂದರು.

ಯಾದಗಿರಿಯು ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಈ ಅದ್ಬುತ ಅವಕಾಶಕ್ಕಾಗಿ ಮತ್ತೊಮ್ಮೆ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಜಿಲ್ಲಾಧಿಕಾರಿ ನುಡಿದರು.

ಮಾನ್ಯ ಪ್ರಧಾನ ಮಂತ್ರಿಯವರು ಜಿಲ್ಲಾಧಿಕಾರಿಯವರಿಗೆ ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮವು ಇತರ ಸರ್ಕಾರಿ ಯೋಜನೆಗಳ ಅನುμÁ್ಠನಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಅಭಿಪ್ರಾಯ ಕೇಳಿದರು

ಜಿಲ್ಲಾಧಿಕಾರಿ ಮಾತನಾಡಿ ಮಹತ್ವಾಕಾಂಕ್ಷೆ ಜಿಲ್ಲೆಯ ಯೋಜನೆಯು ಅಂತರ ಇಲಾಖೆಯ ಸಮನ್ವಯಕ್ಕೆ ಕಾರಣವಾಗಿದೆ. ಇದು ಹೆಚ್ಚು ಕೇಂದ್ರಿಕೃತ , ವಿವಿಧ ಸೂಚ್ಯಂಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಭೌತಿಕ ಮತ್ತು ಆರ್ಥಿಕ ಗುರಿಗಳೊಂದಿಗೆ ಪ್ರತಿ ಸೂಚ್ಯಂಕವು ಕಾರ್ಯಕ್ರಮದ ವಿತರಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಕೇಂದ್ರಿಕರಿಸುತ್ತದೆ. ಈ ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಗಳು ಉತ್ತಮ ಸಮನ್ವಯ ಸಾಧಿಸಲು ಮತ್ತು ಉತ್ತಮ ವಿತರಣೆ ಹಾಗೂ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಪರಿಣಾಮಕಾರಿಯಾಗಿದೆ ಅಲ್ಲದೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಜಿಲ್ಲಾ ಮಟ್ಟದಲ್ಲಿ ಶ್ಲಾಘನೆಗೆ ಪಡೆದಿದ್ದಾರೆ. ವಿವಿಧ ಯೋಜನೆಗಳ ಉತ್ತಮ ಅನುμÁ್ಠನಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಗೌರವಾನ್ವಿತ ಪ್ರಧಾನ ಮಂತ್ರಿಯವರು ಜಿಲ್ಲೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಈ ಯೋಜನೆಯ ಪರಿಣಾಮಕಾರಿಯಾಗಿ ಅನುμÁ್ಠನ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.

Related Articles

Leave a Reply

Your email address will not be published. Required fields are marked *

Back to top button