ಶಹಾಪುರಃ ಗುಡುಗು, ಗಾಳಿ ಮಿಶ್ರಿತ ಮಳೆ- ರಸ್ತೆಗೆ ಅಡ್ಡಲಾಗಿ ಬಿದ್ದ ಮರ, ಸಂಚಾರ ಅಸ್ತವ್ಯಸ್ತ
ಶಹಾಪುರಃ ಗುಡುಗು, ಗಾಳಿ ಮಿಶ್ರಿತ ಮಳೆ
ರಸ್ತೆಗೆ ಅಡ್ಡಲಾಗಿ ಬಿದ್ದ ದೊಡ್ಡ ಮರ, ಸಂಚಾರ ಅಸ್ತವ್ಯಸ್ತ
ಶಹಾಪುರಃ ಕಳೆದ ವಾರದಿಂದ ಬಿಸಿಲಿನ ತಾಪಕ್ಕೆ ಬೇಸತ್ತ ಜನರಿಗೆ ಸೋಮವಾರ ಸಂಜೆ ಗುಡುಗು, ಬಿರುಗಾಳಿಯಿಂದ ಕೂಡಿದ ಮಳೆಯಾಗಿದ್ದು, ಒಂದಿಷ್ಟು ತಂಪೆರಿಯಿತು.
ಆದರೆ ತಾಲೂಕಿನ ದೋರನಹಳ್ಳಿ ಸಮೀಪದ ಸೀಮೆ ಮರೆಮ್ಮ ದೇವಸ್ಥಾನದ ಹತ್ತಿರ ಶಹಾಪುರ-ಯಾದಗಿರಿ ಹೆದ್ದಾರಿ ಮೇಲೆ ದೊಡ್ಡ ಮರವೊಂದು ಬಿರುಗಾಳಿಗೆ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಆದರೆ ಹೆದ್ದಾರೆ ಮೇಲೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಒಂದುವರೆ ಗಂಟೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಜನರು ಮರ ಕಡಿಯುವ ಯಂತ್ರ ತಂದು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಕೊಯ್ದು ವಾಹನ ಸಂಚಾರಕ್ಕೆ ಸುಗಮ ದಾರಿಗೊಳಿಸಿದ್ದಾರೆ.
ಎರಡು ಕಡೆ ಸುಮಾರು ಎರಡು ಕೀ.ಮೀ.ವರೆಗೂ ವಾಹನಗಳು ನಿಂತಿದ್ದು, ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ಈ ವೇಳೆ ಅಂಬ್ಯುಲೆನ್ಸ್ ಒಂದು ಸಿಲುಕಿದ್ದು ಪರದಾಡುವಂತಾಯಿತು. ಈ ದಾರಿ ಬಿಟ್ಟರೆ ಬೇರೆ ಮಾರ್ಗ ಇಲ್ಲದಿರುವ ಕಾರಣ ಅನಿವಾರ್ಯವಾಗಿ ಕಾಯಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಶಹಾಪುರ-ಯಾದಗಿರಿ ಹೆದ್ದಾರೆ ಮೇಲೆ ದೊಡ್ಡ ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸುಮಾರು ಎರಡು ಕೀ.ಮೀ,ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಕ್ಕಳು, ವೃದ್ಧರು ತೊಂದರೆ ಅನುಭವಿಸಿದರು. ಅಲ್ಲದೆ ಈ ಮಧ್ಯೆ ಅಂಬ್ಯುಲೆನ್ಸ್ ವಾಹನವೊಂದು ಸಿಕ್ಕಿಹಾಕೊಂಡು ತುರ್ತು ರೋಗಿಗಳು ಚಿಕಿತ್ಸೆ ದೊರೆಯದೇ ಒಂದಿಷ್ಟು ಕಾಲ ತೊಂದರೆ ಅನುಭವಿಸುವಂತಾಯಿತು. ವಾಹನದಲ್ಲಿ ರೋಗಿಗೆ ಬೇಕಾದ ಚಿಕಿತ್ಸೆ ಪೂರಕವಾಗಿತ್ತು.
-ಡಾ.ರಾಜೇಂದ್ರ ತಡಿಬಿಡಿ. ಪ್ರತ್ಯಕ್ಷದರ್ಶಿ.