ಜೀವ್ಹೇಶ್ವರ ಜಯಂತ್ಯುತ್ಸವಃ ಅಭೀಷೇಕ ವಿಶೇಷ ಪೂಜೆ
ಜೀವ್ಹೇಶ್ವರ ಜಯಂತ್ಯುತ್ಸವಃ ಅಭೀಷೇಕ ವಿಶೇಷ ಪೂಜೆ
ಶಹಾಪುರಃ ಜೀವ್ಹೇಶ್ವರ ಜಯಂತ್ಯೋತ್ಸವ ಅಂಗವಾಗಿ ಇಲ್ಲಿನ ಸ್ವಕುಳ ಸಾಳಿ ಸಮಾಜ ನಗರದ ಜೀವ್ಹೇಶ್ವರ ಮಂದಿರದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸುವ ಮೂಲಕ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ, ಪ್ರತಿ ವರ್ಷ ಸಮಾಜದವತಿಯಿಂದ ಶ್ರೀಜೀವ್ಹೇಶ್ವರರ ಜಯಂತಿ ಅದ್ದೂರಿಯಾಗಿ ಆಚರಿಸಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ಶ್ರೀದೇವರಲ್ಲಿ ಕೂಡಲೇ ಕೊರೊನಾ ವೈರಸ್ ಜಗತ್ತಿನಿಂದಲೇ ಮಾಯವಾಗಲಿ. ಆರೋಗ್ಯಕರ ಸಮಾಜ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಲಾಗಿದೆ.
ಅಲ್ಲದೆ ಸಮಾಜ ಬಂಧುಗಳು ಮನೆಯಲ್ಲಿಯೇ ಶ್ರೀಜೀವ್ಹೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವ ಮೂಲಕ ಪೂಜೆ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.
ಬೆಳಗ್ಗೆಯಿಂದಲೇ ಜೀವ್ಹೇಶ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಮಹಿಳಾ ಸಂಘಟನೆಯಿಂದ ಜೀವ್ಹೇಶ್ವರರ ತೊಟ್ಟಿಲೋತ್ಸವ ನೆರವೇರಿಸಲಾಯಿತು. ಕೊರೊನಾ ನಿಯಮಾವಳಿಯನ್ನು ಪಾಲಿಸಲಾಯಿತು. ಮಂದಿರದಲ್ಲಿ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಯ್ಯ ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ನಾಗೇಂದ್ರಪ್ಪ ದಂಡು, ಸಂತೋಶ ಶಿರವಾಳ, ಸಿದ್ದಣ್ಣ ಶಿರವಾಳಕರ್, ರಾಮು ಮಿರ್ಜಿ, ಕೊಟ್ರೆಪ್ಪ ಚಿಲ್ಲಾಳ ಸೇರಿದಂತೆ ಇತರರಿದ್ದರು.